ಇದು ಹಗಲು ದರೋಡೆಯಲ್ಲಾ…ಇಂಡಿ ಪಂಪ್ “ಹುಲಿಯ” ರಾತ್ರಿ ದರೋಡೆ….

Share to all

ಇದು ಹಗಲು ದರೋಡೆಯಲ್ಲಾ…ಇಂಡಿ ಪಂಪ್ “ಹುಲಿಯ” ರಾತ್ರಿ ದರೋಡೆ….

ಹುಬ್ಬಳ್ಳಿ:-ಹಗಲಿರುಳು ದುಡಿದು ವಾರಕ್ಕೊಮ್ಮೆ ಪಗಾರ ಮನೆಗೆ ಒಯ್ಯೋರನ್ನೂ ಬಿಟ್ಟಿಲ್ವಂತೆ ನಮ್ಮ ಇಂಡಿ ಪಂಪ್ “ಹುಲಿ”..ಅದು ಹಗಲಲ್ಲಾ..ರಾತ್ರಿಯ ದರೋಡೆ ಅಂದರೂ ಪರವಾಗಿಲ್ಲಾ..

ಕಳೆದ ಹದಿನೈದು ದಿನಗಳ ಹಿಂದೆ ಅರವಿಂದ ನಗರದ ಇಎಸ್ ಐ ಆಸ್ಪತ್ರೆಯ ಎದುರಿಗೆ ರಾತ್ರಿ ಹತ್ತು ಘಂಟೆಯ ನಂತರ ಗೆಳೆಯರು ಮಾತಾನಾಡತಾ ನಿಂತಾಗ ನೈಟ್ ರೌಂಡ್ ಪೋಲೀಸ ಚಾಲುಕ್ಯ ವಾಹನ ಬಂದಿದ್ದನ್ನು ನೋಡಿ ಓಡಿ ಹೋಗುವಾಗ ವ್ಯಕ್ತಿಯೊಬ್ಬನ ಕಿಸೆಯಿಂದ ಐವತ್ತು ಸಾವಿರ ಒಂದು ಗೋಲ್ಡ ರಿಂಗ್ ಕೆಳಗೆ ಬೀಳುತ್ತೆ.ಅಲ್ಲಿಂದಲೇ ಚಾಲೂ ಆಗುತ್ತೆ “ಹುಲಿಯ” ರಾತ್ರಿ ದರೋಡೆ..

ಇದ್ದಿದ್ದರಲ್ಲೇ ಪ್ರಾಮಾಣಿಕ ಪೋಲೀಸರು ಇದ್ದಾರೆ..ಆ ರಾತ್ರಿಯ ಐವತ್ತು ಸಾವಿರ ಒಂದು ಗೋಲ್ಡ್ ರಿಂಗ್ ಸೀದಾ ಒಯ್ದು ಹುಲಿಯ ಬಾಯಿಗೆ ಇಟ್ಟು ನನ್ನ ಕೆಲಸ ಮುಗೀತೂ ಅಂತಾ ಸುಮ್ಮನಾಗಿ ಬಿಡತಾರೆ ಅಲ್ಲಿಂದ ಚಾಲೂ ಹುಲಿಯ ಆಟ..

ಐವತ್ತು ಸಾವಿರ ಕಳೆದುಕೊಂಡವರು ಠಾಣೆಗೆ ಹೋದರೆ ನಿಮ್ಮ ತಂದೆ ತಾಯಿ ಕರೆದುಕೊಂಡು ಬಂದು ನಿಮ್ಮ ದುಡ್ಡು ಒಯ್ಯಿರೀ ಅಂತಾ ಒಂದು ವಾರ ಸತಾಯಿಸುವ “ಹುಲಿ”ಕೊನೆಗೆ ಅದರಲ್ಲಿ ಒಂದಿಷ್ಟು ತಿಂದು ಉಳಿದದ್ದನ್ನು ಕೊಟ್ಟು ಕಳಿಸಿ ಮಾನವೀಯತೆ ಮೆರೆದಿದ್ದಾರಂತೆ..ಬಡವರನ್ನೂ ಬಿಡದ ಈ “ಹುಲಿರಾಯನ” ಬಗ್ಗೆ ಕಮೀಷನರ್ ಸಾಹೇಬ್ರು ಒಂದಲ್ಲ ಹತ್ತ ಸಲ ಜಾಡಿಸಿ ಕಳಿಸಿದ್ದರೂ ಹಗ್ಗ ತಿನ್ನೋ ಚಾಳಿ ಬಿಡತಿಲ್ಲವಂತೆ.

ಐವತ್ತರಲ್ಲಿ ಒಂದಿಷ್ಟು ಹೋದರೂ ಪರವಾಗಿಲ್ಲಾ..ಹುಲಿಯ ಬಾಯಿಂದ ಅಷ್ಟಾದರೂ ಬಂತಲ್ಲಾ ಅಂತಾ ಖುಷಿ ಪಡಿ ಎಂದು ಅವರ ಸಿಬ್ಬಂದಿಯೇ ಸಮಾಧಾನ ಪಡಿಸಿ ಕಳಿಸದರಂತೆ ಹೇಗೆದೆ ನೋಡಿ ಇಂಡಿ ಪಂಪ್ ಹುಲಿಯ ಘರ್ಜನೆ..ಇದು ಒಂದು ಸ್ಯಾಂಪಲ್ ಮಾತ್ರ ಆ ಹುಲಿಯ ಆಟ ರೀಯಲ್ ಎಸ್ಟೇಟ್ ದಿಂದ ಹಿಡಿದು ಸಂತ್ರಸ್ಥೆಯ ದೂರಿನಲ್ಲೂ ಬಿಟ್ಟಿಲ್ಲಾ “ಹುಲಿಯ” ಆಟ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author