ಮೂರು ದಿನದಲ್ಲಿ ಮತ್ತೊಂದು ಬೆಳಕಿಗೆ ಬಂತು ಲವ್ ಜಿಹಾದ್..ಎಲ್ಲಿಗೆ ಬಂತು ಹುಬ್ಬಳ್ಳಿ..ಪ್ರತಿಷ್ಠಿತ ಹೊಟೆಲ್ ಮಾಲಿಕನೂ ಭಾಗಿ..!

Share to all

ಮೂರು ದಿನದಲ್ಲಿ ಮತ್ತೊಂದು ಬೆಳಕಿಗೆ ಬಂತು ಲವ್ ಜಿಹಾದ್..ಎಲ್ಲಿಗೆ ಬಂತು ಹುಬ್ಬಳ್ಳಿ..ಪ್ರತಿಷ್ಠಿತ ಹೊಟೆಲ್ ಮಾಲಿಕನೂ ಭಾಗಿ..!

ಹುಬ್ಬಳ್ಳಿ:-ಕಳೆದ ಮೂರು ದಿನಗಳಿಂದ ಹುಬ್ಬಳ್ಳಿಯಲ್ಲಿ ಸದ್ದು ಮಾಡಿರುವ ಸಮೀರ ಲವ್ ಜಿಹಾದ ಪ್ರಕರಣದ ಬೆನ್ನಲ್ಲೇ ಮತ್ತೊಂದು ಲವ್ ಜಿಹಾದ್ ಪ್ರಕರಣ ಹುಬ್ಬಳ್ಳಿಯಲ್ಲಿಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ಕಮರೀಪೇಟೆಯ ಮುಫೀಜ್ ಮಿಯಾನ್ನವರ ಎಂಬಾತ ಹಿಂದೂ ಯುವತಿಯ ಮೇಲೆ ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಲೈಂಗಿಕ ದೌರ್ಜನ್ಯ ಎಸಗಿರೋದಾಗಿ ಯುವತಿ ಹುಬ್ಬಳ್ಳಿಯ ಕೇಶ್ವಾಪುರ ಪೋಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಕಾಲೇಜ್ ಇವೆಂಟ್ ಒಂದರಲ್ಲಿ ಮುಸ್ಲಿಂ ಯುವತಿಯ ಸಹಾಯದಿಂದ ಆಕೆಯನ್ನು ಪರಿಚಯ ಮಾಡಿಕೊಂಡಿದ್ದ ಮುಪೀಜ್ ಬೈಕನಲ್ಲಿ ಸುತ್ತಾಡಿಸಿ ಸಲುಗೆ ಬೆಳೆಸಿದ್ದ.

ಆ ಸಲುಗೆಯನ್ನೇ ಬಳಸಿಕೊಂಡು ಮುಂದೆ ಒಂದಲ್ಲಾ ಹಲವು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಅಲ್ಲದೇ ಪೋಟೋ ವಿಡಿಯೋಗಳನ್ನೂ ಮಾಡಿಕೊಂಡು ಅವುಗಳನ್ನು ವೈರಲ್ ಮಾಡತೇನಿ..ನೀನು ಈ ವಿಷಯ ಯಾರಿಗಾದರೂ ಹೇಳಿದರೆ ನಿಮ್ಮ ತಂದೆ ತಾಯಿಯನ್ನೂ ಸಾಯಸ್ತೇನಿ ಅಂತಾ ಹೆದರಿಸುತ್ತಿದ್ದನಂತೆ.

ಈ ಒಂದು ಪ್ರಕರಣದಲ್ಲಿ ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೆಲ್ಲೊಂದರ ಮಾಲಿಕನೂ ಭಾಗಿಯಾಗಿದ್ದಾನೆಂದು ಸ್ವತ: ಸಂತ್ರಸ್ಥೆ ಹೇಳಿದ್ದಾಳೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author