ಹುಬ್ಬಳ್ಳಿ-ಧಾರವಾಡದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಬೆನ್ನುಬಿದ್ದಿರುವ ಹುಬ್ಬಳ್ಳಿ-ಧಾರವಾಡ ಪೋಲೀಸರು ಧಾರವಾಡದ ಸಬರಬನ್ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಕ್ರಿಕೆಟ್ ಬೆಟ್ಟಿಂಗ್ ರೇಡ್ ಮಾಡಿದ್ದಾರೆ.
ನಿನ್ನೆ ಇಂಗ್ಲೆಂಡ್ ಅಪಘಾನಿಸ್ತಾನ ಮದ್ಯೆ ನಡೆಯುತ್ತಿದ್ದ ವಿಶ್ವಕಪ್ ಕ್ರಿಕೆಟ್ ಪಂದ್ಯದ ಮೇಲೆ ಬೆಟ್ಟಿಂಗ್ ಆಡುತ್ತಿದ್ದ ಧಾರವಾಡದ ಮೆಹತಾಬ್.ಹಾವೇರಿಪೇಟ ಎಂಬ ಯುವಕನನ್ನು ಸಿಸಿಬಿ ಪೋಲೀಸರು ಆರೆಸ್ಟ ಮಾಡಿದ್ದು ಬಂದಿತನಿಂದ ಎಪ್ಪತ್ತು ಸಾವಿರ ನಗದು ಹಣ ಹಾಗೂ ಒಂದು ಮೋಬ್ಯೆಲ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉದಯ ವಾರ್ತೆ ಧಾರವಾಡ