ನೈಟ್ ರೌಂಡ್ಸ್ ನಲ್ಲಿ ಮೂವರ ಜೀವ ಉಳಿಸಿದ DYSP… ಮಳೆ..ನೀರು ಲೆಕ್ಕಿಸದೇ ನೀರಿಗೆ ಇಳಿದ ವಿನೋದ ಮುಕ್ತೇದಾರ..
ಹುಬ್ಬಳ್ಳಿ: ಧಾರಾಕಾರ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಹಳ್ಳದಲ್ಲಿ ಸಿಲುಕಿದ್ದ ಮೂವರ ಸಮೇತ ನೂರಕ್ಕೂ ಹೆಚ್ಚು ಕುರಿಗಳನ್ನ ರಕ್ಷಣೆ ಮಾಡುವಲ್ಲಿ ಧಾರವಾಡ ಜಿಲ್ಲೆಯ DYSP ವಿನೋದ ಮುಕ್ತೇದಾರ ಹಾಗೂ ಅವರ ತಂಡ ಯಸಶ್ವಿಯಾಗಿದೆ..
ನಿನ್ನೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಬಳಿ ಸುರಿದ ಮಳೆಯಿಂದ ಹಳ್ಳದ ಬಳಿ ಸೆಡ್ ನಲ್ಲಿ ಸಿಲುಕಿಕೊಂಡಿದ್ದ ಮೂವರು ಜನ ಮತ್ತು ಕುರಿಗಳನ್ನ ಪೋಲೀಸರು ರಕ್ಷಣೆ ಮಾಡಿದ್ದಾರೆ..
ಬ್ಯಾಹಟ್ಟಿ ಕುಸುಗಲ್ ರಸ್ತೆಯಲ್ಲಿನ ದೊಡ್ಡಹಳ್ಳ ಮತ್ತು ಲಂಡ್ಯಾನ ಹಳ್ಳದಲ್ಲಿ ಹನಮಂತಪ್ಪ ಕಲ್ಲಪ್ಪ ಬೇವೂರ, ಹಜರೇಸಾಬ ನೂಲ್ವಿ ಮತ್ತು ರಾಯಪ್ಪ ಕಬ್ಬೇರ ಸಿಲುಕಿದ್ದರು. ಅವರ ಜೊತೆಗೆ ನೂರಾರೂ ಕುರಿಗಳು ಇರುವುದು ಗೊತ್ತಾಗಿತ್ತು.
ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದ ಹಾಗೇ ರಾತ್ರೋರಾತ್ರಿ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ವಿನೋದ ಮುಕ್ತೆದಾರ, ತಹಶೀಲ್ದಾರ ಸೇರಿದಂತೆ ಹಲವರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ…
ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ನೂರಕ್ಕೂ ಹೆಚ್ಚು ಕುರಿಗಳ ಸಮೇತ ಮೂವರನ್ನೂ ಯಾವುದೇ ತೊಂದರೆಯಲ್ಲಿ ಸಿಲುಕದ ಹಾಗೇ ಹೊರಗೆ ತರಲಾಗಿದೆ.