ಹುಸೇನಸಾಬ ಕಳಸ ಅವರ ಮನೆಗೆ ಸಚಿವ ಸಂತೋಷ ಲಾಡ್ ಭೇಟಿ.. ಕುಟುಂಬಸ್ಥರಿಗೆ ಪರಿಹಾರ ಧನದ ಆದೇಶ ಪ್ರತಿ ವಿತರಣೆ

Share to all

ಹುಸೇನಸಾಬ ಕಳಸ ಅವರ ಮನೆಗೆ ಸಚಿವ ಸಂತೋಷ ಲಾಡ್ ಭೇಟಿ.. ಕುಟುಂಬಸ್ಥರಿಗೆ ಪರಿಹಾರ ಧನದ ಆದೇಶ ಪ್ರತಿ ವಿತರಣೆ

ಹುಬ್ಬಳ್ಳಿ :- ಹಳೇಹುಬ್ಬಳ್ಳಿಯ ಬೀರಬಂದ ಓಣಿಯ ನಿವಾಸಿ ದಿ. ಹುಸೇನಸಾಬ ಕಳಸ ಅವರ ಮನೆಗೆ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದೇ ಸಂದರ್ಭದಲ್ಲಿ ಸರಕಾರದ ಪರಿಹಾರ ಧನದ ಆದೇಶ ಪ್ರತಿಯನ್ನು ಸಚಿವರು ಕುಟುಂಬಸ್ಥರಿಗೆ ವಿತರಿಸಿದರು. ಹೊಲದಿಂದ ಮನೆಗೆ ಹಿಂತಿರುಗುವಾಗ ಸುರಿದ ಅಪಾರ ಪ್ರಮಾಣದ ಮಳೆಗೆ ಹುಸೇನಸಾಬ ಅವರು ಕೊಚ್ಚಿ ಹೋಗಿದ್ದರು. ನಿನ್ನೆ ದಿನ ಮೃತರ ದೇಹ ಪತ್ತೆಯಾಗಿತ್ತು.

ಶಾಸಕರಾದ ಎನ್.ಎಚ್.ಕೋನರಡ್ಡಿ, ಅಪರ ಜಿಲ್ಲಾಧಿಕಾರಿ‌ ಗೀತಾ ಸಿ.ಡಿ.,ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ರುದ್ರೇಶ ಘಾಳಿ. ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಬ್ಬಳ್ಳಿ ಶಹರ ತಹಶಿಲ್ದಾರ ಕೆ.ಆರ್.ಪಾಟೀಲ, ಮುಖಂಡರಾದ ಅಲ್ತಾಫ್ ಹಳ್ಳೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author