ಶ್ರೀನಾಥ ಜೋಶಿಗೆ ಸಚ್೯ ವಾರೆಂಟ್ ಜಾರಿ..ಬಂಧನದ ಬೀತಿಯಿಂದ ತಲೆಮರೆಸಿಕೊಂಡ ಎಸ್ ಪಿ ಜೋಶಿ.

Share to all

ಶ್ರೀನಾಥ ಜೋಶಿಗೆ ಸಚ್೯ ವಾರೆಂಟ್ ಜಾರಿ..ಬಂಧನದ ಬೀತಿಯಿಂದ ತಲೆಮರೆಸಿಕೊಂಡ ಎಸ್ ಪಿ ಜೋಶಿ.

ಬೆಂಗಳೂರು:-ಲೋಕಾಯುಕ್ತ ಅಧಿಕಾರಿಗಳ ಜೊತೆ ಸೇರಿ ಬ್ರಹ್ಮಾಂಡ್ ಬ್ರಷ್ಟಾಚಾರ ಮಾಡಿದ್ದ ಪ್ರಕರಣದಲ್ಲಿ ಲೋಕಾಯುಕ್ತ ಎಸ್ ಪಿ ಶ್ರೀನಾಥ ಜೋಶಿಗೆ ಸಚ್೯ ವಾರೆಂಟ್ ಜಾರಿ ಮಾಡಲಾಗಿದೆ.

ಸಚ್೯ ವಾರೆಂಟ್ ಜಾರಿಗೆ ಮುನ್ನವೇ ಪೋನ್ ಸ್ವಿಚ್ಡ್ ಆಪ್ ಮಾಡಿಕೊಂಡಿರುವ ಶ್ರೀನಾಥ ಜೋಶಿ ಪ್ರಕರಣದಿಂದ ಪಾರಾಗಲು ಕಂಡ ಕಂಡ ರಾಜಕಾರಿಣಿಗಳ ಮನೆಬಾಗಿಲು ಬಡೆಯುತ್ತಿದ್ದಾರೆ ಎನ್ನಲಾಗಿದೆ.

ಕಳೆದ ಎರಡು ದಿನದ ಹಿಂದೆ ಐಪಿಎಸ್ ಅಧಿಕಾರಿ ಶ್ರೀನಾಥ ಜೋಶಿ ಅವರ ಬೆಂಗಳೂರಿನ ಮನೆಯ ಮೇಲೆ ಲೋಕಾಯುಕ್ತ ಪೋಲೀಸರು ರೇಡ್ ಮಾಡಿದಾಗಲೂ ಸಹ ಶ್ರೀನಾಥ ಜೋಶಿ ಅವರು ಮನೆಯಲ್ಲಿರಲಿಲ್ಲವಂತೆ.ಆದಾಗ್ಯೂ ಕೂಡಾ ಲೋಕಾಯುಕ್ತರು ಮನೆ ಸಚ್೯ ಮಾಡಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡು ಬಂದಿದ್ದರು.

ಅದಾದ ನಂತರ ಆರೋಪಿ ನಿಂಗಪ್ಪ ಬಾಯಬಿಟ್ಟ ಕೆಲವು ವಿಷಯಗಳು ಶ್ರೀನಾಥ ಜೋಶಿ ಅವರಿಗೆ ಕಂಟಕವಾಗಲಿದೆ ಎನ್ನಲಾಗಿದೆ.ಜೊತೆಗೆ ಆರೋಪಿ ಬಳಿ ಸಿಕ್ಕ ಎರಡು ಡೈರಿಗಳು ಮಹತ್ವದ ಸುಳಿವು ನೀಡಿದೆ ಎನ್ನಲಾಗಿದೆ.

ಉದಯ ವಾರ್ತೆ
ಬೆಂಗಳೂರು.


Share to all

You May Also Like

More From Author