ಕಾಂಗ್ರೆಸ್ ಮುಖಂಡನ ಫಾಮ್೯ ಹೌಸನಲ್ಲಿ ಒಂದು ರಾತ್ರಿಯ ಪ್ರಕರಣ….1400 ಕೋಟಿಯ ರಹಸ್ಯ..ಭರ್ಜರಿ ಭೇಟೆಯಾಡಿದ ಪೋಲೀಸರು…
ಹುಬ್ಬಳ್ಳಿ:- ಧಾರವಾಡ ಜಿಲ್ಲೆಯಲ್ಲಿರುವ ಪ್ರಭಾವಿ ಕಾಂಗ್ರೆಸ್ ಮುಖಂಡರೊಬ್ಬರ ಫಾಮ್೯ ಹೌಸನಲ್ಲಿ ನಡೆದ ಒಂದು ರಾತ್ರಿಯ ಭಯಾನಕ ಪ್ರಕರಣವನ್ನು ಬಹುತೇಕ ಪೋಲೀಸರು ಬೇಧಿಸಿದ್ದಾರೆ ಎನ್ನಲಾಗಿದೆ..
ಕಳೆದ ಐದಾರು ತಿಂಗಳುಗಳಿಂದ ಆ ಒಂದು ರಾತ್ರಿ ಸಕ್ಸಸ್ ಮಾಡಲು ಹೊಂಚು ಹಾಕಿದ್ದ ಮೂರು ಡಜನ್ ಕಿತಾಪತಿಗಳ ಪತ್ತೆಗೆ ಖಡಕ್ ಹಿರಿಯ ಪೋಲೀಸ ಅಧಿಕಾರಿ ಏಳೆಂಟು ಇನ್ಸ್ಪೆಕ್ಟರ್.. ಇಬ್ಬರು DYSP..ಎಕ್ಸಪಟ್೯ ಕ್ರೈಂ ಸಿಬ್ಬಂದಿಗಳೊಂದಿಗೆ ಸ್ವತಃ IPS ಅಧಿಕಾರಿಯೇ ಫೀಲ್ಡಿಗಿಳಿದು ಪ್ರಕರಣ ತಾರ್ಕಿಕ ಅಂತ್ಯಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಆ ಒಂದು ರಾತ್ರಿಯ ಸುತ್ತಮುತ್ತ 1400 ಕೋಟಿ ಹಣ..ಬೆಳ್ಳಿ..ಬಂಗಾರ ಅನ್ನೋ ಗಾಳಿ ಸುದ್ದಿಯು ರಾಜ್ಯಾದ್ಯಂತ ಹರದಾಡಿದ್ದು ಸತ್ಯಾ ಸತ್ಯತೆಯನ್ನ ಇನ್ನೆರಡು ದಿನದಲ್ಲಿ ಪೋಲೀಸ ಅಧಿಕಾರಿಗಳು ರಿವೀಲ್ ಮಾಡಲಿದ್ದಾರೆ ಎನ್ನಲಾಗಿದೆ.
ಆ ಒಂದು ರಾತ್ರಿಯ ಪ್ರಕರಣದಲ್ಲಿ ಈಗಾಗಲೇ ರಾಜ್ಯ ಸುತ್ತಾಡಿದ ಪೋಲೀಸ ಟೀಂ ಹದಿನೆಂಟು ಜನರನ್ನು ಹೆಡಮುರಿ ಕಟ್ಟಿದ್ದಾರೆ.ಇದು ರಾಜ್ಯದ ಇತಿಹಾಸದಲ್ಲೇ ದೊಡ್ಡ ಪ್ರಕರಣ ಎನ್ನಲಾಗಿದ್ದು ಆ ಪ್ರಕರಣ ಭೇಧಿಸಿದ ಕೀರ್ತಿ ನಮ್ಮ ಜಿಲ್ಲೆಯ ಪೋಲೀಸರಿಗೆ ಸಲ್ಲಲಿದೆ.