ED ಅಧಿಕಾರಿಗಳ ಸೋಗಿನಲ್ಲಿ ದರೋಡೆ..3 ಕೋಟಿ ಚಿನ್ನಾಭರಣ ದೋಚಿ ಪರಾರಿ….
ಹುಬ್ಬಳ್ಳಿ:- ಕಳೆದ ಒಂದು ವಾರದ ಹಿಂದೆ ಹುಬ್ಬಳ್ಳಿಯ ಹೃದಯ ಭಾಗದಿಂದಲೇ ಇಡಿ ಅಧಿಕಾರಿಗಳ ಸೋಗಿನಲ್ಲಿ ಚಿನ್ನಾಭರಣ ವ್ಯಾಪಾರಿಯೊಬ್ಬನನ್ನು ಹೆದರಿಸಿ ಮೂರು ಕೋಟಿ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ.
ನಗರದ ನೀಲಿಜನ್ ರಸ್ತೆಯ ರೇಣುಕಾ ಲಾಡ್ಜ್ ಬಳಿ ಬಂದ ಇಡಿ ಅಧಿಕಾರಿಗಳೆಂದು ಹೇಳಿಕೊಂಡು ಕೇರಳ ಮೂಲದ ಸುದೀನ್ ಎನ್ನುವ ವ್ಯಕ್ತಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಹೆದರಿಸ ಚಿನ್ನಾಭರಣ ಮತ್ತು ಹಣ ಪಡೆದು ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಹುಬ್ಬಳ್ಳಿ ಉಪನಗರ ಪೋಲೀಸರು ತನಿಖೆ ನಡೆಸಿದ್ದಾರೆ.