ಬಿಜೆಪಿ ಕಾರ್ಯಕರ್ತೆ ಬೆತ್ತಲೆ ಪ್ರಕರಣ…ಪೋಲೀಸ ಠಾಣೆ ಮುಂದೆ ಕುಳಿತ ಮೇಯರ್… ಡೆಪ್ಯೂಟಿ ಮೇಯರ್..
ಹುಬ್ಬಳ್ಳಿ: ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತೆ ಸುಜಾತಾ ಬೆತ್ತಲೆ ಹಲ್ಲೆ ಆರೋಪದ ಹಿನ್ನೆಲೆಯಲ್ಲಿ, ಬಿಜೆಪಿ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದು, ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಆಗಮಿಸುತ್ತಿದ್ದಂತೆ, ಮೇಯರ್ ಜ್ಯೋತಿ ಪಾಟೀಲ್,ಉಪ ಮೇಯರ ಸಂತೋಷ ಚವ್ಹಾಣ,ಮಹಿಳಾ ಮೋರ್ಚಾ ಅಧ್ಯಕ್ಷರನ್ನು ಕರೆಯಿಸಿ ಮಾಹಿತಿ ಹೇಳುತ್ತಿದ್ದರು. ಬ್ಯಾರಿಕೇಡ್ ದಾಟಿ ಬಂದ ಬಿಜೆಪಿ ಮುಖಂಡರು ಪೊಲೀಸ್ ಠಾಣೆ ಮೆಟ್ಟಿಲ ಮೇಲೆ ಕುಳಿತು ಘೋಷಣೆ ಕೂಗಿದರು.
https://youtu.be/A_Bv-NvWDus?si=MhotwirkKsQYxhej
ಕಮಿಷನರ್ ಮಾಹಿತಿ ನೀಡಲು ಒಳಗೆ ಕರೆದಾಗ ಜಟಾಪಟಿ ನಡೆಯಿತು.ಈ ಸರಕಾರದಲ್ಲಿ ಕಾನೂನೇ ಇಲ್ಲಾ…ಮಹಿಳೆಯರಿಗೆ ರಕ್ಷಣೆ ಇಲ್ಲಾ..ಕಾಂಗ್ರೆಸ್ ಸರಕಾರ ಡೌನ್..ಡೌನ್ ಅಂತಾ ಘೋಷಣೆ ಕೂಗಿದರು.