ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಸ್ವಚ್ಛ ಸಂಕಲ್ಪ ಮ್ಯಾರಾಥಾನ್ ಮತ್ತು ಸೈಕ್ಲೋಥಾನ್..
ಹುಬ್ಬಳ್ಳಿ:ನಗರದ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ‘ಸ್ವಚ್ಛ ಭಾರತ ಮಿಷನ್ ಭಾಗವಾಗಿ ಇದೇ ಜನವರಿ 11ರಂದು ಬೆಳಿಗ್ಗೆ 7 ಗಂಟೆಗೆ ‘ಸ್ವಚ್ಛ ಸಂಕಲ್ಪ ಓಟ’ ಎಂಬ ವಿಶೇಷ ಮ್ಯಾರಥಾನ್ ಹಾಗೂ ಸೈಕ್ಲೋಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಸ್ವಚ್ಛತೆಯಲ್ಲಿ ನಾಗರೀಕರ ಸಹಭಾಗಿತ್ವ ಅತಿ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ನಗರದ ವಿವಿಧ ನಾಗರಿಕರು, ವಿವಿಧ ಸಂಘಟನೆಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಜನ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪಾಲಿಕೆಯು ಮನವಿ ಮಾಡಿದೆ.
ಸ್ವಚ್ಛ ಭಾರತ ಮಿಷನ್ ಅಭಿಯಾನವನ್ನು ಯಶಸ್ವಿಗೊಳಿಸಲು ಜನಭಾಗವಹಿಸುವಿಕೆ ಅಗತ್ಯ. ಈ ‘ಸ್ವಚ್ಛ ಸಂಕಲ್ಪ ಓಟ’ವು ಕೇವಲ ಒಂದು ಕ್ರೀಡಾ ಕಾರ್ಯಕ್ರಮವಾಗಿರದೆ, ಆರೋಗ್ಯಕರ ಮತ್ತು ಸುಂದರ ಅವಳಿ ನಗರ ನಿರ್ಮಾಣದ ಸಂಕೇತವಾಗಿದೆ,” ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಕಾರ್ಯಕ್ರಮದ ವಿವರಗಳು:
ದಿನಾಂಕ: ಜನವರಿ 11
ಸಮಯ: ಬೆಳಿಗ್ಗೆ 7 ಗಂಟೆಗೆ
ಪ್ರಾರಂಭದ ಸ್ಥಳ: ತೋಳನಕೆರೆ, ಹುಬ್ಬಳ್ಳಿ
ಮಾರ್ಗ: ತೋಳನಕೆರೆಯಿಂದ ವಿದ್ಯಾನಗರ ಮಾರ್ಗವಾಗಿ ಉಣಕಲ್ ಕೆರೆಯವರೆಗೆ
ಆಸಕ್ತ ನಾಗರಿಕರು ಹಾಗೂ ಕ್ರೀಡಾ ಪ್ರೇಮಿಗಳು ಅಂದು ಬೆಳಿಗ್ಗೆ ನಿಗದಿತ ಸಮಯಕ್ಕೆ ತೋಳನಕೆರೆಯ ಬಳಿ ಹಾಜರಿರಬೇಕೆಂದು ಈ ಮೂಲಕ ಕೋರಲಾಗಿದೆ.
ಪ್ರಕಟಣೆ,
ಆಯುಕ್ತರು,
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ.