ಇಂಡಿಪಂಪ ಕಡೆ “ನಾಗರಿಕ ಸಮಾಜ” ತಲೆತಗ್ಗಿಸುವ ಅಮಾನವೀಯ ಘಟನೆ…
ಹುಬ್ಬಳ್ಳಿ: ಹಳೇಹುಬ್ಬಳ್ಳಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣವೊಂದು ನಡೆದಿದ್ದು, ಪೊಲೀಸರು ಘಟನೆಯ ಬೆನ್ನುಬಿದ್ದು ಪ್ರಕರಣದಲ್ಲಿ ಭಾಗಿಯಾದವರನ್ನೆಲ್ಲಾ ವಶಕ್ಕೆ ಪಡೆದಿದ್ದಾರೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಯುವಕರು ಮಹಿಳೆಯೊಂದಿಗೆ ಅಸಭ್ಯವಾಗಿ ಬಟ್ಟೆ ಬಿಚ್ಚಿ ವರ್ತಿಸಿ, ವೀಡಿಯೋ ಮಾಡಿಕೊಂಡಿದ್ದು, ಅದು ಸ್ಥಳೀಯರಿಗೆ ಗೊತ್ತಾಗಿದೆ. ಇದರಿಂದ ರೋಸಿ ಹೋದ ಸ್ಥಳೀಯರು ಇಬ್ಬರು ಯುವಕರ ತಲೆ ಬೋಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಹಿಳೆಯ ಜೊತೆ “ಹಾಗೆಲ್ಲಾ” ಮಾಡಿರುವ ವೀಡಿಯೋ ಮತ್ತು ಯುವಕರ ಜೊತೆ ಹಿರಿಯರು ನಡೆದುಕೊಂಡ ರೀತಿ ಅನಾಗರಿಕವಾದ ಪರಿಣಾಮ, ಎಲ್ಲರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.