ಹೊಟ್ಟೆಪಾಡಿಗೆ ದೂರದ ರಾಜ್ಯದಿಂದ ಹುಬ್ಬಳ್ಳಿಗೆ ಬಂದರು..ಮಾಡಬಾರದ ಕೆಲಸ ಮಾಡಿ ಜೈಲು ಪಾಲಾದರು…
ಹುಬ್ಬಳ್ಳಿ:- ದೂರದ ರಾಜ್ಯ ಛತ್ತೀಸಘಡದಿಂದ ಬಂದ ಒಂದೇ ಕುಟುಂಬ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಪತಿ.ಪತ್ನಿ ಮಗ ಜೈಲು ಸೇರಿದ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ.
ಹುಬ್ಬಳ್ಳಿಯ ನವನಗರ ಬಳಿ ಇರುವ ಕಾನೂನು ವಿಶ್ವವಿದ್ಯಾಲಯದ ಬಳಿ ಕಟ್ಟಡ ಕೆಲಸ ಮಾಡಿಕೊಂಡಿದ್ದ ಮೇಘವ ಸತನಾಮಿ..ಭಗವಾನದಾಸ…ವಿಮಲಾ ಸತನಾಮಿ ಎಂಬವರು ವಿಠಲ್ ರಾಠೋಡ ಎಂಬಾತನನ್ನು ಕೊಲೆ ಮಾಡಿ,ಕಟ್ಡಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂಬ ನಾಟಕವಾಡಿದ್ದರು.
ಪ್ರಕರಣದ ಆಳಕ್ಕೆ ಇಳಿದ ನವನಗರ ಪೋಲೀಸ ಇನಸ್ಪೆಕ್ಟರ್ ಜಯಂತ ಗೌಳಿ ಹಾಗೂ ಅವರ ತಂಡ ಇದು ಆಕಸ್ಮಿಕ ಸಾವಲ್ಲಾ.ಅದು ಕೊಲೆ ಎಂದು ಪತ್ತೆ ಹಚ್ಚಿದ್ದಾರೆ.ಕೊಲೆಗೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿದ್ದು ಪೋಲೀಸರು ತನಿಖೆಯಿಂದ ನಿಜಾಂಶ ಹೊರ ಬರಬೇಕಾಗಿದೆ.