ಧಾರವಾಡ ಶಾಲಾ ಮಕ್ಕಳ ಕಿಡ್ನ್ಯಾಪ್‌ ..ದಾಂಡೇಲಿ ಬಳಿ ಕಿಡ್ನ್ಯಾಪರ್ ಬೈಕ್ ಅಪಘಾತ..ಮಕ್ಕಳು ಸುರಕ್ಷಿತ…

Share to all

ಧಾರವಾಡ ಶಾಲಾ ಮಕ್ಕಳ ಕಿಡ್ನ್ಯಾಪ್‌ ..ದಾಂಡೇಲಿ ಬಳಿ ಕಿಡ್ನ್ಯಾಪರ್ ಬೈಕ್ ಅಪಘಾತ..ಮಕ್ಕಳು ಸುರಕ್ಷಿತ…

ಧಾರವಾಡ:-ಕಮಲಾಪುರದ ಶಾಲಾ ಮಕ್ಕಳನ್ನು ಕಿಡ್ನ್ಯಾಪ್‌ ಮಾಡಿಕೊಂಡು ಹೋಗುತ್ತಿದ್ದಾಗ ದಾಂಡೇಲಿ ಬಳಿ ಕಿಡ್ನ್ಯಾಪರ್ ಬೈಕ್ ಅಪಘಾತವಾಗಿದೆ.

​ಕಮಲಾಪುರ ಶಾಲೆಯ ಆವರಣದಿಂದಲೇ ಇಬ್ಬರು ಪುಟಾಣಿ ಮಕ್ಕಳನ್ನು ಕರೀಂ ಮೇಸ್ತ್ರೀ ಎಂಬ ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಕಿಡ್ನ್ಯಾಪ್ ಮಾಡಿಕೊಂಡು ಹೋದ ಆತಂಕಕಾರಿ ಘಟನೆ ಇಲ್ಲಿನ ನಾಲ್ಕನೇ ಶಾಲೆಯಲ್ಲಿ ನಡೆದಿದೆ. ಆದರೆ, ಅದೃಷ್ಟವಶಾತ್ ಕಿಡ್ನ್ಯಾಪರ್ ಸಂಚರಿಸುತ್ತಿದ್ದ ಬೈಕ್ ದಾಂಡೇಲಿ ಬಳಿ ಅಪಘಾತಕ್ಕೀಡಾಗಿದ್ದು, ಮಕ್ಕಳು ಸುರಕ್ಷಿತವಾಗಿದ್ದಾರೆ.
ಪೋಲೀಸರ ಇ

ಕಮಲಾಪುರದ 4ನೇ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತನ್ವೀರ ದೊಡಮನಿ..(9) ಲಕ್ಷ್ಮೀ ಕರಿಯಪ್ಪನವರ (9)ಇಬ್ಬರು ವಿದ್ಯಾರ್ಥಿಗಳನ್ನು ಕರೀಂ ಬೈಕ್ ಮೇಲೆ ಕುಳ್ಳಿರಿಸಿಕೊಂಡು ಪರಾರಿಯಾಗಿದ್ದನು. ಶಾಲಾ ಸಮಯದಲ್ಲಿಯೇ ನಡೆದ ಈ ಕೃತ್ಯದಿಂದ ಪೋಷಕರು ಮತ್ತು ಶಿಕ್ಷಕರು ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಶಾಲೆಯ ಸುತ್ತಮುತ್ತ ನೂರಾರು ಜನರು ಜಮಾಯಿಸಿದ್ದರು, ಆಕ್ರೋಶ ವ್ಯಕ್ತಪಡಿಸಿದ್ದರು.

ಕಿಡ್ನ್ಯಾಪರ್ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬೈಕ್ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳೀಯರು ಮತ್ತು ಪೊಲೀಸರು ಜೋಯ್ಡಾದತ್ತ ಧಾವಿಸಿದ್ದಾರೆ. ಅಪಘಾತದ ನಂತರ ಮಕ್ಕಳ ಸ್ಥಿತಿ ಹೇಗಿದೆ ಎಂದು ವಿಚಾರಿಸುತ್ತಿದ್ದಾರೆ.

ಧಾರವಾಡ ​ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೋಲೀಸರು ದಾಂಡೇಲಿಯತ್ತ ಹೊರಟಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author