ಹಳೇಹುಬ್ಬಳ್ಳಿ ಅಕ್ಕಿ ಪ್ರಕರಣ…ಮೂರುರು ಸುತ್ತಿ ಬಂದ ಪೋಲೀಸ ಟೀಂ..ಅಲ್ಲಿಂದ ತಂದಿದ್ದಾರು ಏನು..?
ಹುಬ್ಬಳ್ಳಿ:-ಹಳೇಹುಬ್ಬಳ್ಳಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ರಮ ಅಕ್ಕಿ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿ ಇಂದಿಗೆ ಹದಿನೆಂಟು ದಿನ ಕಳೆದರೂ ಪೋಲೀಸರು ಸ್ವಿಚ್ಡ್ ಆಪ್ ಆದರಾ..!!
ಹದಿನೆಂಟು ದಿನದ ಹಿಂದೆ ಆಹಾರ ಇಲಾಖೆಯವರು ದೂರು ನೀಡುತ್ತಿದ್ದಂತೆ ದೂರದೃಷ್ಟಿ ಹರಿಸಿದ ಶಿವಂ ಸಾಹೇಬ್ರು… ಇಬ್ಬರು ಪಿಎಸ್ಐಗಳ ಹೆಗಲಿಗರ ಅಕ್ಕಿ ಪ್ರಕರಣ ಹೊರಿಸಿದ್ದೇ ತಡ ವೀರಾದಿ ವೀರರು ಪೋಲೀಸರನ್ನು ಕರೆದುಕೊಂಡು ಯುನೋವಾ ಕಾರಿನಲ್ಲಿ ಹೊರಟೇ ಬಿಟ್ಟರು.
ಇನ್ನೇನು ಹೊತ್ತು ಮುಳುಗುವುದರೊಳಗಾಗಿ ಆರೋಪಿಗಳನ್ನು ಹೊತ್ತುಕೊಂಡೇ ಬರುತ್ತಾರೆ ಅಂದುಕೊಂಡರೆ..ಅವರು ಬಂದಿದ್ದು ಪೆನ್ನು..ಹಾಳಿಯಲ್ಲಿ ಲೆಕ್ಕ ಅಂತೆ..ಮರು ದಿನ ಮತ್ತೆ ಅದೇ ಯುನೋವಾ ಗಾಡಿ ಹೋಗಿದ್ದು ಆ ಮೂರುರಿಗೆ ಅಲ್ಲಿಂದಲೂ ಬರೋವಾಗ ಏನೇನೋ ತಂದರಂತೆ.
ಮೂರುರಲ್ಲಿ ಅದೇನೋ ತನಿಖೆ ಮಾಡಿದರೋ ಆ ದೇವರೇ ಬಲ್ಲ..ಆದರೆ ಮೂರುನಾಲ್ಕು ದಿನ “MK”ಯ ತಾರ ಗಾಡಿ ಪೋಲೀಸರ ಸುಪರ್ಧಿಯಲ್ಲಿ ಯಾಕಿತ್ತು..? ಅದನ್ನು ಬಿಟ್ಟಿದ್ದು ಯಾಕೆ? ಅಲ್ಲೇ ಇರೋದು ವಾಸನೆ ಇಲ್ಲದ ಅಕ್ಕಿಯಲ್ಲಿ ಇನ್ನೊಂದು ವಾಸನೆ..ಇನ್ನಷ್ಟು ಮೂರುರು..ತಾರ ಗಾಡಿಯ ವಾಸನೆ ವೀಕ್ಷಿಸಿ ಉದಯ ವಾರ್ತೆಯಲ್ಲಿ..