ಹುಬ್ಬಳ್ಳಿ ಗ್ರಾಮೀಣಕ್ಕೆ ಮುರಗೇಶ ಚನ್ನಣ್ಣವರ ಕಂಟಿನ್ಯೂ…ಸಿದ್ದಾರೂಡ ಬಡಿಗೇರ ಆಂತರಿಕ ಬದ್ರತೆಗೆ..

Share to all

 

ಹುಬ್ಬಳ್ಳಿ ಗ್ರಾಮೀಣಕ್ಕೆ ಮುರಗೇಶ ಚನ್ನಣ್ಣವರ ಕಂಟಿನ್ಯೂ…ಸಿದ್ದಾರೂಡ ಬಡಿಗೇರ ಆಂತರಿಕ ಬದ್ರತೆಗೆ..

ಹುಬ್ಬಳ್ಳಿ:- ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಯಿಂದ ವರ್ಗಾವಣೆಗೊಂಡಿದ್ದ ಇನಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಗೆ ಕಂಟಿನ್ಯೂ ಮಾಡಿ ಸರಕಾರ ಆದೇಶ ಹೊರಡಿಸಿದೆ.

 

ಕಳೆದ ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿ ಗ್ರಾಮೀಣ ಠಾಣೆಗೆ ಶಿದ್ಧಾರೂಢ ಬಡಿಗೇರ ಎಂಬುವರನ್ನ ಸರಕಾರ ಆದೇಶ ಮಾಡಿತ್ತು.ಈಗ ಮತ್ತೆ ಗ್ರಾಮೀಣಕ್ಕೆ ಮುರಗೇಶ ಚನ್ನಣ್ಣವರನ್ನ ಕಂಟಿನ್ಯೂ ಮಾಡಲಾಗಿದೆ.

 

 

ಈ ವರ್ಷ ಇಡೀ ದೇಶಾದ್ಯಂತ ಸುದ್ದಿಯಾಗಬೇಕಿದ್ದ ಇನಾಂಪುರ ಗ್ರಾಮದ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದ ಇನಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಅವರಿಗೆ ಹೋಮ್ ಮಿನಿಸ್ಟರ್ ಜಿ.ಪರಮೇಶ್ವರ ಇತ್ತೀಚೆಗೆ ಅವರ ಕಾರ್ಯವನ್ನು ಪ್ರಶಂಸಿಸಿ ಸನ್ಮಾನ ಮಾಡಿದ್ದರು..ಅವರು ಮತ್ತೆ ಕಂಟಿನ್ಯೂ ಆಗಿರುವುದು ಬಹಳಷ್ಟು ಜನರಿಗೆ ಖುಷಿ ತಂದಿದೆ.

ಅಂತಹ ಒಬ್ಬ ಸೂಪರ್ ಕಾಪ್ ಇನಸ್ಪೆಕ್ಟರ್ ವರ್ಗಾವಣೆ ಸುದ್ದಿ ಕೇಳಿದ್ದ ಅಲ್ಲಿಯ ಕೆಲ ಎಡಬಿಡಂಗಿ ಸಿಬ್ಬಂದಿಗಳು ಆಗಲೇ ಮಂಗ್ಯಾನ ಆಟ ಆರಂಭಿಸಿದ್ದರು.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author