ಹುಬ್ಬಳ್ಳಿಯ ಸಬ್ ಜೈಲಿನಲ್ಲಿ ಗಾಂಜಾ ಘಾಟು..ಬೆಂಗಳೂರು, ಶಿವಮೊಗ್ಗ ಆಯ್ತು ಇದೀಗ ಹುಬ್ಬಳ್ಳಿಯ ಜೈಲ್ ನಲ್ಲೂ ರಾಜಾತಿಥ್ಯ.

Share to all

ಹುಬ್ಬಳ್ಳಿಯ ಸಬ್ ಜೈಲಿನಲ್ಲಿ ಗಾಂಜಾ ಘಾಟು..ಬೆಂಗಳೂರು, ಶಿವಮೊಗ್ಗ ಆಯ್ತು ಇದೀಗ ಹುಬ್ಬಳ್ಳಿಯ ಜೈಲ್ ನಲ್ಲೂ ರಾಜಾತಿಥ್ಯ.

ಹುಬ್ಬಳ್ಳಿ:-ಬೆಂಗಳೂರು, ಶಿವಮೊಗ್ಗ ಆಯ್ತು ಇದೀಗ ಹುಬ್ಬಳ್ಳಿಯ ಜೈಲ್ ನಲ್ಲೂ ರಾಜಾತಿಥ್ಯ.ಕಾರಾಗೃಯ ಇಲಾಖೆಯ ಡಿಜಿಪಿ ಅಲೋಕ್ ಕುಮಾರ ಅವರೇ ನೋಡಿ ಕಾರಾಗೃಹದಲ್ಲಿ ಇರೋ ರಾಜಾತಿಥ್ಯ…

ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ರಾಜಾರೋಷವಾಗಿ ಸಪ್ಲೈ ಆಗುತ್ತಿದೆ ಅಕ್ರಮ ಗಾಂಜಾ..ಸಬ್ ಜೈಲ್ ಹಾಗೂ ಸೆಂಟ್ರಲ್ ಜೈಲ್ ನಲ್ಲಿ ಎಗ್ಗಿಲ್ಲದೇ ಗಾಂಜಾ ಸಪ್ಲೈ.ಜೈಲ್ ನಲಿರೋ ಖೈದಿಗಳಿಗೆ ಎಗ್ಗಿಲ್ಲದೇ ಗಾಂಜಾ ಸಪ್ಲೈ.

ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ ಅವರೇ ಜೈಲ್ ನಲ್ಲಿ ಎಲ್ಲಿಯೂ ಮಾದಕ ವಸ್ತುಗಳ ಬಳಕೆ ಇಲ್ಲಾ ಅಂತೀರಾ ಇಲ್ನೋಡಿ….
ಕಳೆದ ಮೂರು ದಿನಗಳ ಹಿಂದಷ್ಟೇ ಹುಬ್ಬಳ್ಳಿಯ ಉಪ ಕಾರಾಗೃಹ ಹಾಗೂ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದ ಡಿಜಿಪಿ ಅಲೋಕ್ ಕುಮಾರ್.

ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಡಿಜಿಪಿ
ಪರಿಶೀಲನೆ ನಡೆಸಿ ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕುತ್ತಿರೋದಾಗಿ ಹೇಳಿಕೆ ನೀಡಿದ್ದ ಡಿಜಿಪಿ.ಭೇಟಿ ನೀಡಿ ಮೂರು ದಿನಗಳಲ್ಲೇ ಎಗ್ಗಿಲ್ಲದೇ ಸಬ್ ಜೈಲ್‌ನಲ್ಲಿ ಗಾಂಜಾ ಸಪ್ಲೈ.ಹುಬ್ಬಳಿ ಧಾರವಾಡ ಅವಳಿ ನಗರದಲ್ಲಿ ಗಾಂಜಾ , ಮಾದಕ ವಸ್ತುಗಳು ಬಳಕೆ, ಸಪ್ಲೈ ಮುಕ್ತಿಯಾದ್ರೂ ಜೈಲ್ ಗೆ ಎಲ್ಲಿಂದ ಬರ್ತಿದೆ ಮಾದಕ ವಸ್ತು..?
ನಟೋರಿಯಸ್, ಕುಖ್ಯಾತ ರೌಡಿಶೀಟರ್ ಗಳೇ ತುಂಬಿರುವ ಹುಬ್ಬಳ್ಳಿಯ ಉಪಕಾರಾಗೃಹ

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author