ಹುಬ್ಬಳ್ಳಿ ಉಪ ಕಾರಾಗೃಹ ದಲ್ಲಿ ರಾಜಾತೀಥ್ಯ ಪ್ರಕರಣ.
ಉತ್ತರ ವಲಯ ಕಾರಾಗೃಹ ಡಿಐಜಿ ಟಿ ಪಿ ಶೇಷ ಹೇಳಿಕೆ.
ಹುಬ್ಬಳ್ಳಿ:-ಹುಬ್ಬಳ್ಳಿ ಜೈಲಿನಲ್ಲಿ ಖೈದಿಗಳಿಗೆ ರಾಜಾದಿತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉತ್ತರ ವಲಯ ಕಾರಾಗೃಹ ಡಿಐಜಿ ಟಿ ಜಿ ಶೇಷ ಮಾತನಾಡಿ ವೈರಲ್ ವಿಡಿಯೋ ಪರಿಶೀಲನೆ ಮಾಡಿದ್ದೇವೆ.
ಕಳೆದ ಡಿಸೆಂಬರ್ 9 ರಂದು ನಡೆದ ಘಟನೆ ಇದಾಗಿದೆ ಎಂದಿದ್ದಾರೆ.
ಅಲ್ಲದೇ ಉದ್ದೇಶ ಪೂರ್ವಕ ಮಾಡಿದ ವಿಡಿಯೋ ಇದು
ನಾವು ಮಾಡಿದ ಜೈಲು ಸುಧಾರಣಾ ಕಾರ್ಯಕ್ರಮಕ್ಕೆ ನೆಗೆಟಿವ್ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ
ಹಿಂದೆ ಇರುವ ಗೋಡೆಯಿಂದ ಮೊಬೈಲ್ ಒಳಗೆ ಒಗೆದಿರಬಹುದು
ಅದು ಪೆನ್ ಕ್ಯಾಮರಾ ಸಹ ಆಗಿರಬಹುದು.
ನಮ್ಮ ಸಿಬ್ಬಂದಿ ಲೋಪ ದೋಷ ಇದೆ ಅವರ ಮೇಲೆ ಸಹ ಕ್ರಮ ಕೈಗೊಳ್ತೇವೆ.
ಪ್ರಕರಣಕ್ಕೆ ಸಂಬಂಧಿಸಿ 10 ಜನ ಆರೋಪಿಗಳ ಮೇಲೆ ಅಶೋಕ ನಗರ ಪೋಲೀಸ ಠಾಣೆಯಲ್ಲಿ ದೂರು ನೀಡಿದ್ದೇವೆ.