ಹಳೇಹುಬ್ಬಳ್ಳಿ ಅನ್ನಭಾಗ್ಯ ಅಕ್ಕಿ ಪ್ರಕರಣ…ಒಂದು ಪ್ರಕರಣಕ್ಕೆ ಒಂದು ತಿಂಗಳು…ಇನ್ನೊಂದಕ್ಕೆ ಅರ್ಧ ತಿಂಗಳು…ತನಿಖೆ ಝೀರೋ..
ಹುಬ್ಬಳ್ಳಿ:- ಹುಬ್ಬಳ್ಳಿ ಪೋಲೀಸರು ಅಂದರೆ ರಾಜ್ಯದಲ್ಲಿ ಅವರಿಗೊಂದು ಗೌರವ ಇದೆ.ಅಷ್ಟೇ ಅಲ್ಲದೇ ಹುಬ್ಬಳ್ಳಿ-ಧಾರವಾಡಕ್ಕೆ ಎನ್ ಶಶಿಕುಮಾರ ಕಮೀಷನರ್ ಅಂತಾ ಬಂದಾಗಿನಿಂದ ಹುಬ್ಬಳ್ಳಿ-ಧಾರವಾಡ ಹೆಸರೂ ಇನ್ನೂ ಮೇಲ್ಮಟ್ಟಕ್ಕೆ ಹೋಗಿದೆ.
ಅಂತಹ ಖಡಕ..ಇಂಟಲಿಜೆಂಟ್ ಕಮೀಷನರ್ ಇದ್ದರೂ ಹಳೇಹುಬ್ಬಳ್ಳಿ ಪೋಲೀಸರು ಅನ್ನಭಾಗ್ಯ ಅಕ್ಕಿ ಪ್ರಕರಣದ ತನಿಖೆ ಇನ್ನೂ ಝೀರೋ ಹಂತದಲ್ಲಿ ಇದೆ ಅಂದರೆ ಅದಕ್ಕೆ ಉತ್ತರ ಕೊಡೋರು ಯಾರು ಅನ್ನೋ ಪ್ರಶ್ನೆ ಎದ್ದಿದೆ..
ದೂರು ದಾಖಲಾಗುತ್ತಿದ್ದಂತೆ ಮೂರೂರು ಸುತ್ತಿ ಬಂದ ಇಬ್ಬರು ಸಬ್ ಇನಸ್ಪೆಕ್ಟರ್ ಹಾಗೂ ಸಿಬ್ಬಂದಿಗಳು ಏನು ಮಾಡಿದರು ಅನ್ನೋದೆ ಗೊತ್ತಾಗತಾ ಇಲ್ಲಾ..ಎಸಿಪಿ ಸಾಹೇಬ್ರನ್ನ ಕೇಳಿದರೆ ತೊಂಬತ್ತು ದಿನ ಐತ್ರೀ ತನಿಖೆ ಮಾಡತಾ ಇದ್ದೇವೆ ಅಂತಾ ಮಂಗಳಾರತಿ ಹೇಳಿಬಿಡತಾರೆ..
ಹುಬ್ಬಳ್ಳಿ ಪೋಲೀಸರಿಗೆ ಗೌರವ ಇದೇ ಅನ್ನೋದೆ ಆದರೆ ಆ ಎರಡು ಅಕ್ಕಿ ಪ್ರಕರಣಗಳಲ್ಲಿ ಬೆಂಡಿಗೇರಿ ಪೋಲೀಸರು ತನಿಖೆ ಮಾಡಿದಂತೆ ಮಾಡಿ ಅಕ್ಕಿ ಕಿಂಗ್ ಪಿನ್ ಗಳಾದ “MK” ಹಾಗೂ ಪಿಸ್ತೂಲ ಬಾಬಾನನ್ನ ಆರೆಸ್ಟ್ ಮಾಡಿ..ತನಿಖೆ ಒಂದು ಹಂತಕ್ಕೆ ತರಲಿ ಎಂಬುದು ಉದಯ ವಾರ್ತೆಯ ಆಶಯ…..