ಕಾಂಗ್ರೆಸ್ ಮುಖಂಡನ ಕೊಲೆ ಪ್ರಕರಣ…”24″ ಘಂಟೆಯೊಳಗೆ ಆರೋಪಿಗಳ ಹೆಡಮುರಿ ಕಟ್ಟಿದ ಪೋಲೀಸ ಟೀಂ..
ಧಾರವಾಡ:- ಕಳೆದ ಎರಡು ದಿನಗಳ ಹಿಂದೆ ಧಾರವಾಡ ನಗರವನ್ನೇ ಬೆಚ್ಚಿ ಬೀಳಿಸಿದ್ದ ಕಾಂಗ್ರೆಸ್ ಮುಖಂಡ ಪೈರೋಜ್ ಕೊಲೆ ಪ್ರಕರಣದ ಆರೋಪಿಗಳನ್ನ 24 ಘಂಟೆಯೊಳಗೆ ಪೋಲೀಸ ಟೀಂ ಪತ್ತೆ ಹಚ್ಚಿ ಆರೆಸ್ಟ್ ಮಾಡಿದ್ದಾರೆ.
ಕೊಲೆ ನಡೆದ ಕೆಲ ಘಂಟೆಗಳಲ್ಲೇ ಇಬ್ಬರನ್ನು ವಶಕ್ಕೆ ಪಡೆದಿದ್ದ ಪೋಲೀಸರು ಪ್ರಮುಖ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು.ಈಗ ಉಳಿದ ಆರು ಜನ ಕೊಲೆಗಡುಕರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಎ-1 ಆರೋಪಿ ಮಹ್ಮದ ಶಾ ಸಂಬಂಧಿಕರ ಮನೆಯಲ್ಲಿದ್ದಾಗ ಆರೋಪಿಗಳನ್ನು ಆರೆಸ್ಟ್ ಮಾಡಿದ್ದಾರೆ.ತಡ ರಾತ್ರಿ ಐವರು ಆರೋಪಿಗಳನ್ನು ಬಂಧಿಸಿರುವ ಪೋಲೀಸರು ಇನ್ನೋರ್ವ ಆರೋಪಿಗಾಗಿ ಬಲೆ ಬೀಸಿದ್ದಾರೆ.