ಧಾರವಾಡ:- ಕಳೆದ ಎರಡು ದಿನಗಳ ಹಿಂದೆ ಧಾರವಾಡದ ಹಾಸ್ಮಿ ನಗರದಲ್ಲಿ ನಡೆದ ಕಾಂಗ್ರೆಸ್ ಮುಖಂಡ ಪೈರೋಜ್ ನ ಭೀಕರ ಹತ್ಯೆಯ ಹಿಂದೆ ಅಸಲಿ ಸತ್ಯ ಏನೂ ಅನ್ನೋದು ಪ್ರಶ್ನಾರ್ಥಕವಾಗಿದೆ.
ಸಾಯಂಕಾಲ ಮನೆಯ ತೂಗುಮಣೆಯ ಮೇಲೆ ಮದುವೆಯ ವಿಚಾರ ಮಾಡುತ್ತಾ ಕುಳಿತಿದ್ದ ಪೈರೋಜನನ್ನು ಮಾತನಾಡಿಸಲು ಬಂದ ಗೆಳೆಯ ಸಂಚು ಹಾಕಿಕೊಂಡೇ ಬಂದಿದ್ದನಂತೆ.ಗೆಳೆಯ ಮಾತನಾಡುವಾಗ ಪೈರೋಜನಿಗೆ ಒಂದು ಪೋನ ಬಂದ ತಕ್ಷಣ ಗೇಟ್ ಕಡೆ ಮಾತನಾಡುವಾಗಲೇ ಅಲ್ಲೇ ಇಬ್ಬರು ಚಾಕು ಹಾಕೇ ಬಿಟ್ಟರಂತೆ.
ದುಷ್ಕರ್ಮಿಗಳು ಚಾಕು ಹಾಕುತ್ತಲೇ ಒಳಗೆ ಓಡಿ ಹೋಗಿ ರೂಮಿನ ಕದ ಹಾಕಿದರೂ,ಕದ ಮುರಿದು ಹೆತ್ತ ತಾಯಿಯ ಕಣ್ಣೆದುರೇ ಆರೋಪಿಗಳು ಕರುಳ ಕುಡಿಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾದರಂತೆ..
ಈ ಹಿಂದೆಯೇ ಕೆಲವರ ವಿರುದ್ಧ ಪೋಲೀಸ ಠಾಣೆ ಮತ್ತು ಹೋಮ್ ಮಿನಿಸ್ಟರಗೂ ನಮಗೆ ಜೀವ ಬೆದರಿಕೆ ಇದೆ ಎಂದು ಪೈರೋಜ್ ಹಾಗೂ ಆತನ ಗೆಳೆಯರು ದೂರು ನೀಡಿದ್ದರಂತೆ.ಏನೇ ದೂರು ನೀಡಿದ್ದರೂ ಪೈರೋಜ್ ಮಾತ್ರ ಉಳಿಯಲಿಲ್ಲಾ..