ಗೂಟಾ ಜಡಿದಿದ್ದ ಪಾಲಿಕೆಯ ಹತ್ತು ಅಧಿಕಾರಿಗಳ ಎತ್ತಂಗಡಿ..ತಕ್ಷಣ ರಿಲೀವ್ ಮಾಡುವಂತೆ ಸರಕಾರದ ಆದೇಶ.

Share to all

ಗೂಟಾ ಜಡಿದಿದ್ದ ಪಾಲಿಕೆಯ ಹತ್ತು ಅಧಿಕಾರಿಗಳ ಎತ್ತಂಗಡಿ..ತಕ್ಷಣ ರಿಲೀವ್ ಮಾಡುವಂತೆ ಸರಕಾರದ ಆದೇಶ.

ಹುಬ್ಬಳ್ಳಿ:- ಬೇರೇ ಬೇರೆ ಇಲಾಖೆಯಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಂದು ದಶಕಗಳ ಕಾಲ ಗೂಟಾ ಜಡಿದುಕೊಂಡು ಕುಳಿತಿರುವ ಹತ್ತು ಅಧಿಕಾರಿಗಳನ್ನು ಸರಕಾರ ವರ್ಗಾವಣೆಗೊಳಿಸಿ ಆದೇಶಿಸಿದೆ.ಅಲ್ಲದೇ ತಕ್ಷಣ ಅವರನ್ನು ಅವರವರ ಮಾತೃ ಇಲಾಖೆಗೆ ರಿಲೀವ್ ಮಾಡುವಂತೆ ಪಾಲಿಕೆಯ ಕಮೀಷನರಗೆ ಸೂಚಿಸಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಕಂದಾಯ..ಪೌರಾಡಳಿತ..ನೀರಾವರಿ..ಗ್ರಾಮೀಣ ಮತ್ತು ಪಂಚಾಯತ್ ರಾಜ್ಯ ಇಲಾಖೆ..ಜಲಸಂಪನ್ಮೂಲ ಹಾಗೂ ಸರಕಾರದ ಸಚಿವಾಲಯದಿಂದ ಎರಡು ವರ್ಷದ ಅವಧಿಗೆ ವರ್ಗಾವಣೆಗೊಂಡು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಂದು ಕುಳಿತವರಿಗೆ ಸರಕಾರ ಶಾಕ್ ನೀಡಿದೆ.

ವರ್ಗಾವಣೆಗೊಂಡ ಅಧಿಕಾರಿಗಳು…ಗಿರೀಶ ತಳವಾರ (ಪೌರಾಡಳಿತ ಇಲಾಖೆ)..ಉಮೇಶ ಸವಣೂರ (ಕಂದಾಯ ಇಲಾಖೆ) ಪ್ರಹ್ಲಾದ ರೆಡ್ಡಿ (ಪೌರಾಡಳಿತ ಇಲಾಖೆ) ಲಕ್ಷ್ಮೀ‌ ಕಾಂಬಳೆ (ಲೋಕೋಪಯೋಗಿ ಇಲಾಖೆ) ಧಾನೇಶ್ವರಿ ಪಾಟೀಲ (ಪೌರಾಡಳಿತ ಇಲಾಖೆ) ಮಂಜುಳಾ ಚವ್ಹಾಣ (ಪೌರಾಡಳಿತ ಇಲಾಖೆ) ಹನುಮಂತ ಮುಧೋಳ (ಪೌರಾಡಳಿತ ಇಲಾಖೆ)ನಯನಾ ಕೆ ಎಸ್ (ಪೌರಾಡಳಿತ ಇಲಾಖೆ) ಬಿ ಎಸ್ ಜಿದ್ದಿ (ಪೌರಾಡಳಿತ ಇಲಾಖೆ) ಚಂದ್ರಶೇಖರಗೌಡ ಮಾಲಿ ಪಾಟೀಲ.( ಕರ್ನಾಟಕ ಸರಕಾರದ ಸಚಿವಾಲಯ) ಹೀಗೆ ಹತ್ತು ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ..

Oplus_16908288

ಈ ಮೇಲಿನ ಅಧಿಕಾರಿಗಳು ಅವರು ಸರಕಾರದಿಂದ ಎರಡು ವರ್ಷದ ಅವಧಿಗೆ ಬೇರೇ ಇಲಾಖೆಯಿಂದ ಬಂದು..ಇಲ್ಲಯೇ ಬೇರೂರಿ ಬಿಟ್ಟಿದ್ದಾರೆ..ಹುಬ್ಬಳ್ಳಿ ಬಿಟ್ಟು ನಾಹೆಂಗ್ ಹೋಗಲಿ ಅಂತಾ ಮತ್ತೆ ಇಲ್ಲೇ ಉಳಿಯಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ..ಈಗ ಈ ಅಧಿಕಾರಿಗಳ ವರ್ಗಾವಣೆ ಜುಟ್ಟ ಕಮೀಷನರ್ ಡಾ:- ರುದ್ರೇಶ ಘಾಳಿ ಅವರ ಕೈಯಲ್ಲಿದೆ..ಆಡಳಿತಾತ್ಮಕ ಅಂತಾ ಹೇಳಿ ಅವರೆಲ್ಲರನ್ನೂ ಉಳಿಸಿಕೊಳ್ಳತಾರಾ ಅಥವಾ ಸರಕಾರದ ಆದೇಶ ಪಾಲನೆ ಮಾಡತಾರಾ ಕಾದು ನೋಡಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author