ಮಿಡ್ ನೈಟ್ ನಡು ರಸ್ತೆಯಲ್ಲೇ ಹರಿಯಿತು ನೆತ್ತರು..ಅಳಿಯನಿಂದಲೇ ಮಾವನ ಮಡ್೯ರ್..

Share to all

ಮಿಡ್ ನೈಟ್ ನಡು ರಸ್ತೆಯಲ್ಲೇ ಹರಿಯಿತು ನೆತ್ತರು..ಅಳಿಯನಿಂದಲೇ ಮಾವನ ಮಡ್೯ರ್..

ಹುಬ್ಬಳ್ಳಿ:- ಅವರು ಹೊಟ್ಟೆ ಉಪಜೀವನಕ್ಕೆ ಊರಿಂದ ಊರಿಗೆ ಹೋಗಿ ಕೆಲಸ ಮಾಡೋ ಮಾವ ಮತ್ತು ಅಳಿಯ.ಕಳೆದ ರಾತ್ರಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿ ಮಾವನಿಗೆ ಅಳಿಯ ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿದ ಘಟನೆ ಜರುಗಿದೆ.

ಹುಬ್ಬಳ್ಳಿ ತಾಲೂಕಿನ ರೇವಡಿಹಾಳ ಗ್ರಾಮದಲ್ಲಿ ನಡೆದ ಈ ಕೊಲೆಯಲ್ಲಿ ಛಬ್ಬಿ ಗ್ರಾಮದ ದಾದಾಪೀರ (35) ಎಂಬಾತನೇ ಕೊಲೆಯಾದ ವ್ಯಕ್ತಿ..ಅಜೀಮ ಜಮಖಾನೆ ಎಂಬಾತನೇ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ.

ಮನೆ ಕೆಲಸ ಮಾಡಲು ಛಬ್ಬಿಯಿಂದ ರೇವಡಿಹಾಳ ಗ್ರಾಮಕ್ಕೆ ಕೊಲೆಯಾದ ದಾದಾಪೀರ ಎಂಬುವನು ಐದಾರು ಜನರನ್ನು ಕರೆದುಕೊಂಡು ಹೋಗಿದ್ದ…ತನ್ನ ಕೆಲಸಗಾರರಿಗೆ ಅಡ್ವಾನ್ಸ ಹಣ ಕೊಟ್ಟಿದ್ದ..ಹಾಗೇನೇ ಅಜೀಂನಿಗೂ ಕೊಟ್ಟಿದ್ದ.. ಈ ಅಡ್ವಾನ್ಸ್ ಹಣಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿರುವುದಾಗಿ ತಿಳಿದು ಬಂದಿದೆ..

ಪ್ರಕರಣ ದಾಖಲಿಸಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ತನಿಖೆ ನಡೆಸಿದ್ದು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author