ಧಾರವಾಡ ಜಿಲ್ಲೆಯಲ್ಲಿ ಮೊದಲ ಡೆಂಗ್ಯೂ ಕೇಸ್..ಹುಬ್ಬಳ್ಳಿ‌ ಕಿಮ್ಸ್ ನಲ್ಲಿ ಚಿಕಿತ್ಸೆ

Share to all

ಧಾರವಾಡ ಜಿಲ್ಲೆಯಲ್ಲಿ ಮೊದಲ ಡೆಂಗ್ಯೂ ಕೇಸ್..ಹುಬ್ಬಳ್ಳಿ‌ ಕಿಮ್ಸ್ ನಲ್ಲಿ ಚಿಕಿತ್ಸೆ..

ಹುಬ್ಬಳ್ಳಿ:- 2024 ರಲ್ಲಿ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಮಹಾಮಾರಿ ಡೆಂಗ್ಯೂ ಜ್ವರ ಧಾರವಾಡ ಜಿಲ್ಲೆಯಲ್ಲಿ ಮೊದಲ ಕೇಸ್ ಪತ್ತೆಯಾಗಿದೆ.20 ವರ್ಷದ ಯುವಕನಲ್ಲಿ ಡೆಂಗ್ಯೂ ಜ್ವರ ಪತ್ತೆಯಾಗಿದ್ದು ಚಿಕಿತ್ಸೆ ಮುಂದುವರೆದಿದೆ..

ಸತತವಾಗಿ ಬೀಳುತ್ತಿರುವ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಧಾರವಾಡ ಜಿಲ್ಲೆಯಲ್ಲಿ ಈ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ ಎನ್ನಲಾಗಿದೆ..

ಡೆಂಗ್ಯೂದಿಂದ ಎಚ್ಚರವಹಿಸಬೇಕಾದ ಕ್ರಮಗಳು.

ಜನರು ಬಹಳ ದಿನಗಳವರೆಗೆ ನೀರು ಸಂಗ್ರಹಿಸಬಾರದು ಮತ್ತು ಸಂಗ್ರಹಿಸಿದ ತೊಟ್ಟಿ ಗಳನ್ನು ಭದ್ರವಾಗಿ ಮುಚ್ಚಿಡಬೇಕು.

ಜನರು ಪ್ರತಿಬಾರಿ ನೀರು ತುಂಬುವಾಗ ಸಂಗ್ರಹಣಾ ತೊಟ್ಟಿಯಲ್ಲಿ ಇರುವ ಹಳೆಯ ನೀರನ್ನು ಸಂಪೂರ್ಣ ಖಾಲಿ ಮಾಡಿ ತೊಟ್ಟಿಗಳನ್ನು ತಿಕ್ಕಿ ತೊಳೆದು ಹೊಸ ನೀರನ್ನು ತುಂಬಬೇಕು.

ಈಡೀಸ್ ಸೊಳ್ಳೆ ಹಗಲಿನಲ್ಲಿಯೇ ಕಚ್ಚುವುದರಿಂದ ಮನೆಯಲ್ಲಿ ಚಿಕ್ಕ ಮಕ್ಕಳು, ವೃದ್ಧರು, ಬಾಣಂತಿಯರು, ಗರ್ಭಿಣಿಯರು ಪೂರ್ಣ ಮೈ ಮುಚ್ಚುವ ಬಟ್ಟೆಗಳನ್ನು ಧರಿಸುವುದು ಹಾಗೂ ಹಗಲು ಮತ್ತು ರಾತ್ರಿ ಮಲಗುವಾಗ ತಪ್ಪದೇ ಸೊಳ್ಳೆ ಪರದೆ ಬಳಸುವದು.

ಮಳೆಗಾಲ ಆರಂಭ ಆಗಿರುವದರಿಂದ ಮನೆಯ ಸುತ್ತ ಎಸೆಯಲಾದ ತೆಂಗಿನ ಚಿಪ್ಪು, ಟಾಯರ್ ಇತರೇ ಘನ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವುದು ಮತ್ತು ಇಂತಹ ಘನ ತ್ಯಾಜ್ಯಗಳಲ್ಲಿ ಮಳೆಯ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವದು.

ಯಾವುದೇ ಜ್ವರ ಪ್ರಕರಣ ಕಂಡು ಬಂದಲ್ಲಿ ಸಮೀಪದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author