ವಿಚಾರಣಾಧೀನ ಕೈದಿಗೆ ರಾಜಾತಿತ್ಯ..? ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಹೀಗೂ ಉಂಟೆ…
ಹುಬ್ಬಳ್ಳಿ:- ಜೈಲು ಅಧಿಕಾರಿಗಳು ಒಂದಿಲ್ಲಾ ಒಂದು ಎಡವಟ್ಟು ಮಾಡಿಕೊಂಡೇ ಬಿಡತಾರೆ ಅನ್ನೋದಕ್ಕೆ ಧಾರವಾಡದ ಕಾಂಗ್ರೆಸ್ ಯುವ ಮುಖಂಡ ಪೈರೋಜ್ ಕೊಲೆ ಪ್ರಕರಣದ ಆರೋಪಿ ಮೈನುದ್ದೀನ್ ನಧಾಪಗೆ ಆಸ್ಪತ್ರೆಯಲ್ಲಿ ರಾಜಾತೀತ್ಯ ನೀಡಿರುವುದೇ ಸಾಕ್ಷಿಯಾಗಿದೆ.
ಕಳೆದ ಎಪ್ರೀಲ್ 10 ರಂದು ಧಾರವಾಡದಲ್ಲಿ ಕಾಂಗ್ರೆಸ್ ಯುವ ಮುಖಂಡ ಪೈರೋಜ್ ಪಠಾಣ ಎಂಬುವನನ್ನು ಅವನ ಮನೆಯಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈನೂದ್ದೀನ್ ನಧಾಪ ಅವನನ್ನು ಬಂಧಿಸಲಾಗಿತ್ತು.
ಈಗ ಅನಾರೋಗ್ಯದ ನೆಪದಲ್ಲಿ ಮೈನುದ್ದೀನ್ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.ಆದರೆ ಅಲ್ಲಿ ಅವನಿಗೆ ಮೋಬೈಲ್..ಸರಾಯಿ ಸಪ್ಲೈ ಮಾಡಲಾಗುತ್ತಿದೆ ಎಂದು ಕೊಲೆಯಾದ ವ್ಯಕ್ತಿಯ ಸಹೋದರ ಜೈಲ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ….
ವಿಚಾರಣಾಧೀನ ಕೈದಿಗಳಿಗೆ ಇಷ್ಟೆಲ್ಲಾ ಅನುಕೂಲ ಸಿಕ್ಕರೆ ಕ್ರೈಂ ಕಂಟ್ರೋಲ್ ಹೆಂಗೆ ಆಗುತ್ತೇ.ಮತ್ತು ಇಂತಹ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಮೋಬೈಲ್ ಕೊಟ್ಟರೆ ಸಾಕ್ಷಿದಾರರಿಗೆ ಬೆದರಿಕೆ ಹಾಕದೇ ಇರತಾರಾ ಅನ್ನೋ ಮಾತುಗಳೂ ಸಹ ಕೇಳಿಬರತಿವೆ.