ಹುಬ್ಬಳ್ಳಿ:- ಕೈಗಡ ಅಂತಾ ತೆಗೆದುಕೊಂಡಿದ್ದ ಐನೂರು ರೂಪಾಯಿ ವಾಪಾಸ್ಸು ಕೊಡೋ ವಿಚಾರಕ್ಕೆ ಅಟೋ ಡ್ರೈವರ್ ಒಬ್ಬನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಯಲ್ಲಾಪುರ ಓಣೆಯಲ್ಲಿ ನಡೆದಿದೆ.
ಅಟೋ ಡ್ರೈವರ್ ಆಗಿದ್ದ ಈರಣ್ಣಾ ಹುರಕಡ್ಲಿ ಎಂಬುವನೇ ಕೊಲೆಯಾದ ವ್ಯಕ್ತಿ.. ಶಶಿಧರ ಎಂಬುವನು ಕೊಲೆ ಮಾಡಿದ್ದು ಆರೋಪಿಯನ್ನು ಹುಬ್ಬಳ್ಳಿಯ ಬೆಂಡಿಗೇರಿ ಪೋಲೀಸರು ಬಂಧಿಸಿದ್ದಾರೆ.
ಜೂನ್ 25 ರಂದು ಐನೂರು ವಾಪಾಸ್ಸು ಕೊಡೋ ವಿಚಾರವಾಗಿ ಕೊಲೆಯಾದ ಈರಣ್ಣ ಹಾಗೂ ಶಶಿಧರ ನಡುವೆ ಗಲಾಟೆ ಆಗಿದ್ದು.ಅದೇ ಸಂದರ್ಭದಲ್ಲಿ ಶಶಿಧರ ಕಲ್ಲಿನಿಂದ ಈರಣ್ಣನ ತಲೆಗೆ ಹೊಡೆದು ಗಾಯಗೊಳಿಸಿದ್ದ ನಂತರ ಈರಣ್ಣನನ್ನು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಈರಣ್ಣ ಸಾವನ್ನಪ್ಪಿದ್ದಾನೆ.