ಒಬ್ಬನ “ರುಂಡ” ಹೊಲದಾಗ ಬಿದ್ದ ಮೇಲೆ ಎಚ್ಚೆತ್ತ ಶಾಸಕರು..ಮೂರು ವರ್ಷ RTO..ಪೋಲೀಸ ನೆನೆಪೇ ಆಗಲಿಲ್ವಾ….

Share to all

ಒಬ್ಬನ “ರುಂಡ” ಹೊಲದಾಗ ಬಿದ್ದ ಮೇಲೆ ಎಚ್ಚೆತ್ತ ಶಾಸಕರು..ಮೂರು ವರ್ಷ RTO..ಪೋಲೀಸ ನೆನೆಪೇ ಆಗಲಿಲ್ವಾ….

ಹುಬ್ಬಳ್ಳಿ:- ಕಳೆದ ನಾಲ್ಕು ದಿನಗಳ ಹಿಂದೆ ಟಿಪ್ಪರಗಳ ಅಟ್ಟ ಹಾಸಕ್ಕೆ ಹದಿನೇಳು ವರ್ಷದ ವಿದ್ಯಾರ್ಥಿಯ ರುಂಡ ಕತ್ತರಿಸಿ ನೂರು ಮೀಟರ ಹೋಗಿ ಜಮೀನಿನಲ್ಲಿ ಬಿದ್ದು ಅವರ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ..

ಶಿರಹಟ್ಟಿ..ಮುಂಡರಗಿ ಕಡೆಯಿಂದ ದಿನ ನಿತ್ಯ ಹಲವಾರು ಟಿಪ್ಪರಗಳು ಅಕ್ರಮವಾಗಿ ಮರಳು ತುಂಬಿಕೊಂಡು ಲಕ್ಷ್ಮೇಶ್ವರ ಕಡೆಯಿಂದ ಕುಂದಗೋಳ ಮಾರ್ಗವಾಗಿ ಹುಬ್ಬಳ್ಳಿಗೆ ಬರುತ್ತಿವೆ..ನಿಮ್ಮದೇ ಕ್ಷೇತ್ರ ಕುಂದಗೋಳ ಮತ್ತು ಗುಡಗೇರಿ ಪೋಲೀಸರು ಒಂದೇ ಒಂದು ಲಾರಿ ಹಿಡಿದು ಕೇಸ್ ಮಾಡಲ್ಲಾ..ಅಂದರೆ ಏನರ್ಥ…ಹಿಡಿತಾರೆ ಅದು ಎಂಎಂ ಇಲ್ಲದ ಲಾರಿಗಳನ್ನ ಮಾತ್ರ…ಅದು ಅಲ್ಲೇ 161..

ಇನ್ನೂ RTO ಗಳದಂತೂ ಕೇಳಂಗೇ ಇಲ್ಲಾ ಬಿಡಿ ಅವರದು ಪೋಲೀಸರಿಗಿಂತ ಡಿಫರಂಟ್ ರಸ್ತೆಯ ಮೇಲೆ ಯಾವಾಗಲಾದರೊಮ್ಮೆ ನಿಲ್ಲತಾರೆ..ಡೈರಿಯಲ್ಲಿ ನಂಬರ ನೋಡತಾರೆ..ಡೈರಿಯಲ್ಲಿ ನಂಬರ ಇದ್ದರೆ ಓಕೆ..ಇಲ್ಲಾ ಅಂದರೆ ಹೊಡೀರಿ ಗಾಡಿ ಆಪೀಸಿಗೆ ಅಂತಾರೆ…ಏನ್ರೀ ಶಾಸಕರೇ ಇದು…

ಇಂತಹ ಅಕ್ರಮ ಟಿಪ್ಪರಗಳ ವಿರುದ್ಧ ಅವರದೇ ಪಕ್ಷದ ಮುಖಂಡ ಎ ಬಿ ಉಪ್ಪಿನ ವಿದ್ಯಾರ್ಥಿ ರುಂಡ ಹೋದ ಮೇಲೆ ಪೋಲೀಸ ಮತ್ತು RTO ಗಳ ವಿರುದ್ದ ಅಸಮಾಧಾನಾ ವ್ಯಕ್ತಪಡಿಸಿದ್ದಾರೆ..ಅವರು ಸಾಕಷ್ಟು ಬಾರಿ ಪೋಲೀಸರಿಗೆ ಹೇಳಿದ್ದಾರಂತೆ ಕ್ಯಾರೇ ಅಂದಿಲ್ವಂತೆ ಇದು ಕುಂದಗೋಳದ ವ್ಯವಸ್ಥೆ…

ಶಾಸಕರಾದವರಾದೂ ಏನ್ ಮಾಡಬೇಕು..ಅವರ ಸರಕಾರ ಇಲ್ಲಾ…ಸರಕಾರ ಇದ್ದವರು ಮಾಜಿಗಳದೇ ದರ್ಭಾರ ಒಬ್ಬರಿಗಲ್ಲಾ ಮೂರು..ಮೂರು ಇನಸ್ಪೆಕ್ಟರಗಳಿಗೆ ಲೆಟರ್ ಕೊಡತಾರೆ..ಅಲ್ಲಿ ಬಲ ಇದ್ದವರು ಪೋಸ್ಟಿಂಗ್ ಮಾಡಿಸಿಕೊಂಡು ಅವರ ಕೆಲಸ ಅವರ ಮಾಡ್ತಾರೆ ಅಷ್ಟೇ..

 

ಇವತ್ತು ಶಾಸಕರು ಎಲ್ಲರ ಮೀಟಿಂಗ್ ಕರೆದಿದ್ದಾರೆ.. ಅಕ್ರಮ ಮರಳು ಸಾಗಾಣಿಕೆ ವಿರುದ್ದ ಗುಡುಗತಾರಾ..ತನಿಖೆಗೆ ಪಟ್ಟು ಹಿಡಿತಾರಾ..ಅಥವಾ ಚಹಾ ಬಿಸ್ಕಿಟ್ ತಿಂದು ಹಿಂಗಾದರ ನಾ ಸುಮ್ಮನಿರಂಗಿಲ್ಲಾ ಅಂತಾ ನಮಸ್ಕಾರ ಮಾಡಿ ಹೋಗತಾರಾ ಕಾದು ನೋಡಬೇಕಾಗಿದೆ…

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author