ಬೆಳ್ಳಂ ಬೆಳೆಗ್ಗೆ ತಾರಿಹಾಳದಲ್ಲಿ ಹರಿದ ನೆತ್ತರು…ಪತಿಯಿಂದ ಪತ್ನಿಯ ಮಡ್೯ರ್….

Share to all

ಬೆಳ್ಳಂ ಬೆಳೆಗ್ಗೆ ತಾರಿಹಾಳದಲ್ಲಿ ಹರಿದ ನೆತ್ತರು…ಪತಿಯಿಂದ ಪತ್ನಿಯ ಮಡ್೯ರ್….

ಹುಬ್ಬಳ್ಳಿ:- ಮದುವೆಯಾಗಿ ನಾಲ್ಕು ತಿಂಗಳು ತುಂಬಿ ಐದನೇ ತಿಂಗಳು ಆರಂಭ.. ಆದರೆ ಪತ್ನಿ ಗಂಡನ ಮನೆಯಲ್ಲಿ ಇದ್ದದ್ದು ಕೇವಲ ಹತ್ತೇ ಹತ್ತು ದಿನ ಅಂತೆ ಆ ಸಿಟ್ಟಿಗೆ ಗಂಡ ತನ್ನ ಪತ್ನಿಯ ತಲೆ ಒಡೆದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿ ಸಮೀಪ ತಾರಿಹಾಳ ಗ್ರಾಮದಲ್ಲಿ ನಡೆದಿದೆ..

ತಾರಿಹಾಳ ಗ್ರಾಮದ ಗಣೇಶ ನಗರದ ನಿವಾಸಿ ಶಿವರಾಜ್ ಹುಲಿಮನಿ ವಯಸ್ಸು (28) ಕಳೆದ ನಾಲ್ಕೂವರೆ ತಿಂಗಳ ಹಿಂದೆ ಇಬ್ರಾಹಿಂಪುರ ಗ್ರಾಮದ ನಾಗರತ್ನ (22) ಎಂಬುವಳನ್ನು ಮದುವೆಯಾಗಿದ್ದ..ಮದುವೆಯಾದಾಗಿನಿಂದ ಗಂಡನ ಜೊತೆಗೆ ಆಗಾಗ ಜಗಳ ಮಾಡಿ ತವರು ಮನೆಗೆ ಹೋಗುತ್ತಿದ್ದಳಂತೆ..ಈಗ ಕಳೆದ ಬುಧವಾರವಷ್ಟೇ ತವರು ಮನೆಯಿಂದ ಬಂದಿದ್ದಳು.

ಮುಂಜಾನೆ ಕ್ಷುಲ್ಲಕ ಕಾರಣಕ್ಕೆ ಪತಿ ಮತ್ತು ಪತ್ನಿಯ ಮದ್ಯೆ ಜಗಳ ಆರಂಭವಾಗಿ ಪತಿ ಹೆಲ್ಮೆಟ್ ನಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.ಸ್ಥಳಕ್ಕೆ ಧಾರವಾಡ ಎಸ್ ಪಿ..ಡಿವೈಎಸ್ಪಿ ಹಾಗೂ ಇನಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಭೇಟಿ ನೀಡಿದ್ದು ತನಿಖೆ ನಡೆಸಿದ್ದಾರೆ ಅಲ್ಲದೇ ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author