ಬೆಸ್ಟ್ ಮ್ಯಾನೇಜಮೆಂಟ್ ಇನಸ್ಪೆಕ್ಟರ್ ಕೌಜಲಗಿಗೆ .ಪಂಚವಾರ್ಷಿಕಕ್ಕೆ ಒಂದೇ ಹೆಜ್ಜೆ..
ಹುಬ್ಬಳ್ಳಿ:-ಕಲಘಟಗಿಗೆ ಇನಸ್ಪೆಕ್ಟರ್ ಯಾರ್ರೀ ಅಂತಾ ಕೇಳಿದರೆ ಕಳೆದ ಐದು ವರ್ಷದಿಂದ ಕೇಳಿ ಬರುತ್ತಿರುವುದು ಒಂದೇ ಹೆಸರು..ಅದೇ ಇನಸ್ಪೆಕ್ಟರ್ ಶ್ರೀಶೈಲ್ ಕೌಜಲಗಿ ಅವರ ಹೆಸರು…ಕಲಘಟಗಿ ಠಾಣೆಗೆ ಇನಸ್ಪೆಕ್ಟರ್ ಆಗಿ ನಾಲ್ಕು ವರ್ಷ ಪೋರೈಸಿ ಐದನೇ ವರ್ಷಕ್ಕೆ ಕಾಲಿಟ್ಟಿರುವ ಕೌಜಲಗಿ ಅವರಿಗೆ ಪೋಲೀಸ ಇಲಾಖೆಯಲ್ಲಿರುವ ಆಡಳಿತದ ಅನುಭವನೇ ಅವರು ಒಂದೇ ಕಡೆ ಇಷ್ಟು ವರ್ಷ ಕೆಲಸ ಮಾಡಲು ಸಾದ್ಯ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಅವರ ಬ್ಯಾಚನ ಯಾರೇ ಇನಸ್ಪೆಕ್ಟರ್ ಕೇಳಿದರೂ ಅವನ್ಗೇನ್ರೀ ನಂಬ ರ ಒನ್ ಮ್ಯಾನೇಜಮೆಂಟ್ ಸ್ಕಿಲ್ ಐತಿ ಮತ್ತು ಬೆಸ್ಟ್ ಆಡಳಿತ ಮಾಡತಾನೆ ಹೀಗಾಗಿ ಸಂತೋಷ ಲಾಡ್ ಅವರನ್ನ ಬಿಟ್ಟು ಕೊಡತಾ ಇಲ್ಲಾ ಅಂತಾ ಹೇಳೋ ಮಾತಿದು..ಅಲ್ಲದೇ ಠಾಣೆಯ ಯಾವುದೇ ಸಿಬ್ಬಂದಿ ಕೇಳಿದರೂ ನಮ್ಮ ಸಾಹೇಬ್ರು ಬೆಸ್ಟ್ ರೀ ಅವರ ಕಡೆ ಕೆಲಸ ಮಾಡೋ ಭಾಗ್ಯ ಸಿಕ್ಕಿದ್ದು ನಮ್ಮ ಪುಣ್ಯ ಅಂತಾ ಹೇಳತಾರೆ…
ಇಂತಹ ಕೆಟ್ಟ ರಾಜಕೀಯ ಪರಿಸ್ಥಿತಿಯಲ್ಲಿ ಅದು ಪೋಲೀಸ ಇಲಾಖೆಯಲ್ಲಿ ಒಂದೇ ಕಡೆ ಐದು ವರ್ಷ ಪೋರೈಸುವುದೆಂದರೆ ಸಾಮಾನ್ಯವೇನಲ್ಲಾ…ಎರಡು ವರ್ಷ ಸನಿಹಕ್ಕೆ ಬಂದರೆ ಇನಸ್ಪೆಕ್ಟರ್ ಗಳಿಗೆ ನಿದ್ದೆನೇ ಬರಲ್ಲಾ…ಎಲ್ಲಿ ಎತ್ತಂಗಡಿ ಮಾಡತಾರೋ ಅಂತಾ ಭಯ ಸುರುವಾಗೇ ಬಿಟ್ಟಿರುತ್ತೇ..