ಹುಬ್ಬಳ್ಳಿಯ ಪ್ರತಿಷ್ಠಿತ ಡಾಕ್ಟರ್..ಉದ್ಯಮಿಗಳಿಂದ ಕೋಕೇನ್ ಸಾಗಾಟ..40 ಲಕ್ಷ ಮೌಲ್ಯದ ಕೋಕೇನ್ ವಶ..

Share to all

ಹುಬ್ಬಳ್ಳಿಯ ಪ್ರತಿಷ್ಠಿತ ಡಾಕ್ಟರ್..ಉದ್ಯಮಿಗಳಿಂದ ಕೋಕೇನ್ ಸಾಗಾಟ..40 ಲಕ್ಷ ಮೌಲ್ಯದ ಕೋಕೇನ್ ವಶ..

ಹುಬ್ಬಳ್ಳಿ:-ಗೋವಾದಿಂದ ಹುಬ್ಬಳ್ಳಿಗೆ ಕಾರಿನಲ್ಲಿ ಕೋಕೇನ್ ತರುತ್ತಿದ್ದ ವೈದ್ಯ ಹಾಗೂ ಇಬ್ಬರು ಉದ್ಯಮಗಳನ್ನು ಧಾರವಾಡ ಸಿಸಿಬಿ ಪೋಲೀಸರು ಆರೆಸ್ಟ್ ಮಾಡಿದ್ದಾರೆ.ಬಂಧಿತರಿಂದ ನಲವತ್ತು ಲಕ್ಷದ ಕೋಕೇನ್ ಹಾಗೂ ಕಾರು ವಶಕ್ಕೆ ಪಡೆದಿದ್ದಾರೆ..

ಈ ಘಟನೆ ಕಳೆದ ಅಗಸ್ಟ್ 9 ರಂದೇ ನಡೆದಿದ್ದು ಇಷ್ಟೊಂದು ದೊಡ್ಡ ಮೊತ್ತದ ಕೋಕೇನ್ ಪತ್ತೆಯಾಗಿದ್ದರೂ ಧಾರವಾಡ ಪೋಲೀಸರು ಇದರ ಜಾಲ ಜಾಲಾಡದೇ ಅವರ ಹೆಸರನ್ನು ಬಯಲಿಗೆ ತರದೇ ಪೋಲೀಸ ವ್ಯವಸ್ಥೆಗೆ ಮಸಿ ಬಳದರಾ ಅನ್ನೋ ಆರೋಪ ಕೇಳಿ ಬಂದಿದೆ.

ಇಷ್ಟೊಂದು ದೊಡ್ಡ ಕಾರ್ಯಾಚರಣೆ ನಡೆಸಿದರೂ ಪ್ರತಿಷ್ಠಿತ ಉದ್ಯಮಿಗಳು..ಮತ್ತು ಡಾಕ್ಟರ್ ಸೇಪ್ ಮಾಡಲು ಪೋಲೀಸರು ಪ್ರಯತ್ನಿಸಿದರಾ..? ಸಣ್ಣ ಸಣ್ಣ ಕಳ್ಳತನದ ಪ್ರಕರಣ ಬೇಧಿಸಿದರೆ ಬೊಬ್ಬೆ ಹೊಡೆವ ಪೋಲೀಸರು ಇದರಲ್ಲಿ ಯಾಕೆ ಹಿಂಗೆ ಅನ್ನೋ ಮಾತುಗಳು ಕೇಳಿಬರತೀವೆ..

ಈ ಪ್ರಕರಣದಲ್ಲಿ ರೀಸಿ ಪಾಂಡೆ..ಸರ್ವೇಶ ಪಾಟೀಲ..ದೀಪಕ ಮುದ್ಗಲ್ ಅವರನ್ನು ಪೋಲೀಸರು ಆರೆಸ್ಟ್ ಮಾಡಿದ್ದು..ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author