ಅಕ್ಕಿಯ ಅಕ್ರಮದ ಆಲದಕಟ್ಟಿಯ ಆಲದ ಮರದ ಕೆಳಗೆ ಇರೋರು ಯಾರು..? ಆಲದಕಟ್ಟಿ ಆರೆಸ್ಟ್ ಆದರೆ ಅಸಲಿ ಸತ್ಯ ಬಯಲಿಗೆ..

Share to all

ಅಕ್ಕಿಯ ಅಕ್ರಮದ ಆಲದಕಟ್ಟಿಯ ಆಲದ ಮರದ ಕೆಳಗೆ ಇರೋರು ಯಾರು..? ಆಲದಕಟ್ಟಿ ಆರೆಸ್ಟ್ ಆದರೆ ಅಸಲಿ ಸತ್ಯ ಬಯಲಿಗೆ..

ಹುಬ್ಬಳ್ಳಿ:- ಸರಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯ ಅಕ್ರಮ ಸಾಗಾಟದ ಕಿಂಗ್ ಪಿನ್ ಎನ್ನಲಾದ ಸರಕಾರಿ ಗೋಡೌನ ಮ್ಯಾನೇಜರ್ ಸುಭಾಸ ಆಲದಕಟ್ಟಿ ವಿರುದ್ಧ FIR ದಾಖಲಾಗಿ 24 ಘಂಟ ಕಳೆದರೂ ಪೋಲೀಸರಿಂದ ತನಿಖೆ ನಡೀತಾ ಇದೆಯಾ ಅನ್ನೋ ಪ್ರಶ್ನೆ ಕುಂದಗೋಳದಲ್ಲಿ ಎದ್ದಿದೆ.

ಸರಕಾರಿ ಕಛೇರಿಯಲ್ಲಿ ಗುತ್ತಿಗೆ ನೌಕರನಾಗಿ ಕಳೆದ ಎರಡು ದಶಕದಿಂದ ಗೋಡೌನದಲ್ಲಿ ಇರುವೆಯಂತೆ ಸಕ್ಕರೆ ಮೇಯುತ್ತಿರುವ ಈ ಸುಭಾಸ ಆಲದಕಟ್ಟಿ ವಿರುದ್ದ ಕೇಳಿ ಬಂದಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅವರ ಮೇಲೆ ದೂರು ದಾಖಲಾಗಿದೆ.ಈತನನ್ನು ಪೋಲೀಸರು ಆರೆಸ್ಟ್ ಮಾಡಿ ಅಕ್ರಮದ ವಾಸನೆ ಬಗ್ಗೆ ತನಿಖೆ ಮಾಡಿದರೆ ಆಲದಕಟ್ಟಿಯ ಆಲದ ಮರದ ಕೆಳಗೆ ಇರೋರು ಯಾರು ಎಂಬ ಅಸಲಿ ಸತ್ಯ ಹೊರಬರಲಿದೆ.

ಕುಂದಗೋಳ ಪೋಲೀಸ ಠಾಣೆಯ ಇಂಟಲಿಜೆಂಟ್ ಇನಸ್ಪೆಕ್ಟರ್ ಅವರು ಈ ಅಕ್ರಮ ಅಕ್ಕಿ ದಂಧೆಯ ಆಳ ಅಗಲದ ಬಗ್ಗೆ ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾಗಿರೋರನ್ನ ಕಂಬಿ ಹಿಂದೆ ಕಳಿಸ್ತಾರೆ ಅನ್ನೋ ಭರವಸೆ ಕುಂದಗೋಳದ ಜನತೆ ಇಟ್ಟಿದ್ದಾರೆ.ಜನತೆಯ ಭರವಸೆಯನ್ನು ಹುಸಿಯಾಗಿಸೋದಿಲ್ಲಾ ಅನ್ನೋದು ಉದಯ ವಾರ್ತೆಯ ನಂಬಿಕೆ…

ಗೋಡೌನ ಸುಬ್ಬನ ಪ್ರತಿ ತಿಂಗಳು ಒಂದು ಅಂಗಡಿಗೆ ಇಂತಿಷ್ಟು ಅಕ್ಕಿ ಕಟಿಂಗ್ ಕಂತ್ರಿ ಸ್ಟೋರಿಯನ್ನ ಸಾಕ್ಷಿ ಸಮೇತ ವೀಕ್ಷಿಸಿ ನಿಮ್ಮ ಉದಯ ವಾರ್ತೆಯಲ್ಲಿ..

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author