ಕುಂದಗೋಳ ಅಕ್ಕಿ ಪ್ರಕರಣ..ವಿನಾಕಾರಣ ಪ್ರವೇಟ್ ವ್ಯಕ್ತಿಯ ಮೇಲೆ ದೂರು ದಾಖಲಿಸಿ.. ಸಿಕ್ಕಾಕಕೊಂಡರಾ ಪುಡ್ ಇನಸ್ಪೆಕ್ಟರ್ ಪೂಜಾರಿ..

Share to all

ಕುಂದಗೋಳ ಅಕ್ಕಿ ಪ್ರಕರಣ..ವಿನಾಕಾರಣ ಪ್ರವೇಟ್ ವ್ಯಕ್ತಿಯ ಮೇಲೆ ದೂರು ದಾಖಲಿಸಿ.. ಸಿಕ್ಕಾಕಕೊಂಡರಾ ಪುಡ್ ಇನಸ್ಪೆಕ್ಟರ್ “ಪೂಜಾರಿ”..

ಹುಬ್ಬಳ್ಳಿ:-ಸರಕಾರಿ ಗೋಡೌನ್..ಅಧಿಕೃತವಾಗಿ ಟೆಂಡರ್ ಪಡೆದ ಲಾರಿ..ಸರಕಾರಿ ಗೋಡೌನದಿಂದ ಅಧಿಕೃತ ಟೆಂಡರ್ ಗಾಡಿಯಲ್ಲಿ ಅನ್ನಭಾಗ್ಯ ಅಕ್ಕಿಯ ಜೊತೆಗೆ ಗೋದಿ ಹೋಗಿದ್ದು ತಪ್ಪು ಅಂತಾ ತಹಶೀಲ್ದಾರ ಅವರೇ ಓಪನ್ ಸ್ಟೇಟಮೆಂಟ್ ಕೊಟ್ಟಿದ್ದಾರೆ.ಹೀಗಿದ್ದಾಗೂ ಖಾಸಗಿ ವ್ಯಕ್ತಿ ಪ್ರವೀಣ ಎನ್ನೋರ ಮೇಲೆ ದೂರು ಕೊಟ್ಟು ಕೈ ಕಟ್ಟಿಸಿಕೊಂಡರಾ ಪುಡ್ ಇನಸ್ಪೆಕ್ಟರ್ ಪೂಜಾರಿ.

ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ಮತ್ತು ಗೋದಿಯ ಗಾಡಿಯನ್ನು ಸಾರ್ವಜನಿಕರು ಹಿಡಿದ ಮೇಲೆ ಅದನ್ನು ಪೋಲೀಸ ಠಾಣೆಯಲ್ಲಿ ಎರಡು ದಿನ ನಿಲ್ಲಿಸಿ ನಕಲಿ ಬಿಲ್ ಗಳನ್ನೂ ರೆಡಿ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳೆಬಂದಿದೆ.ಈ ಅಕ್ರಮದಲ್ಲಿ ಪುಡ್ ಇನಸ್ಪೆಕ್ಟರ್ ಪೂಜಾರಿದೂ ಕೈವಾಡವಿದೆ ಆ ಹಿನ್ನೆಲೆಯಲ್ಲಿ ಅವರ ಮೇಲೂ ದೂರು ದಾಖಲು ಮಾಡಬೇಕೆಂಬುದು ಸಂಘಟನೆಗಳ ಒತ್ತಾಯವಾಗಿದೆ.

ಈ ಅಕ್ಕಿ ಪ್ರಕರಣದಲ್ಲಿ ಪುಡ್ ಇನಸ್ಪೆಕ್ಟರ್ ಅವರ ಮೇಲೆ ದೂರು ದಾಖಲಿಸಿ.ಸಮಗ್ರ ತನಿಖೆ ನಡೆಸಬೇಕು.ಇಲ್ಲದೆ ಹೋದರೆ ಈ ಪ್ರಕರಣದ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗುವುದು ಎಂದು ರಾಜಕೀಯ ಪಕ್ಷದ‌ ಮುಖಂಡರೊಬ್ಬರು ಉದಯ ವಾರ್ತೆಗೆ ಹೇಳಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author