ಕುಂದಗೋಳದಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣ..ಪುಡ್ ಇನಸ್ಪೆಕ್ಟರ್ ಮೇಲೆ‌ ದೂರು ದಾಖಲಿಸಿ SP ಗೆ ದೂರು.

Share to all

ಕುಂದಗೋಳದಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣ..ಪುಡ್ ಇನಸ್ಪೆಕ್ಟರ್ ಮೇಲೆ‌ ದೂರು ದಾಖಲಿಸಿ SP ಗೆ ದೂರು.

ಹುಬ್ಬಳ್ಳಿ:-ಕುಂದಗೋಳದಲ್ಲಿ ನಡೆದಿರುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಅಕ್ರಮ ಕಳ್ಳ ಸಾಗಾಟ ಮತ್ತು ದುರ್ಬಳಕೆಯ ಬಗ್ಗೆ ಕುಲಂಕಷವಾಗಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ (AAP) ಹಾಗೂ KRS ಪಕ್ಷದ ನಿಯೋಗವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿಯಲ್ಲಿ ಮಾನ್ಯ ಎಸ್ಪಿಯವರಿಗೆ ಮನವಿ ಸಲ್ಲಿಸಿತು.

 

ಬಡ ಜನರ ಹಸಿವು ನೀಗಿಸಲು ನೀಡಲಾಗುವ ಸರ್ಕಾರದ ಪಡಿತರ ಅಕ್ಕಿಯು ಅರ್ಹ ಫಲಾನುಭವಿಗಳಿಗೆ ತಲುಪದೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಗಂಭೀರ ವಿಚಾರವಾಗಿದ್ದು, ಇದರ ಹಿಂದಿರುವ ಜಾಲವನ್ನು ಪತ್ತೆಹಚ್ಚಿ ನ್ಯಾಯಯುತ ತನಿಖೆ ನಡೆಸಬೇಕು ಎಂದು ನಿಯೋಗವು ಒತ್ತಾಯಿಸಿತು.

ಪ್ರಕರಣದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳೇ ನೇರವಾಗಿ ಭಾಗಿಯಾದರೂ ಅವರ ವಿರುದ್ಧ ಪ್ರಕರಣ ದಾಖಲಿಸುವುದನ್ನು ಬಿಟ್ಟು ಅವರೆ ದೂರುದಾರರಾಗಿದ್ದಾರೆ.ಹಾಗಾಗಿ ಆ ಅಕ್ಕಿ ಪ್ರಕರಣದಲ್ಲಿ ಪೋಲೀಸರು ನಿಷ್ಪಕ್ಷಪಾತವಾಗಿ ತನಿಖೆ‌ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕಾಗಿದೆ.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯ ಪ್ರಮುಖರು ಉಪಸ್ಥಿತರಿದ್ದರು:
ಮಲ್ಲಪ್ಪ ತಡಸದ – ಜಿಲ್ಲಾಧ್ಯಕ್ಷರು, ಧಾರವಾಡ
ಅವಿನಾಶ ಸದಾನಂದ – ರಾಜ್ಯ ಕಮಿಟಿ ಸದಸ್ಯರು
ಹುಸೇನಬಾಷಾ ತಳವಾಡ– ಸಂಘಟನಾ ಕಾರ್ಯದರ್ಶಿ
ಶಿವರಡ್ಡಿ ರೆಡ್ಡಿ – ಯುವ ಘಟಕದ ಉಪಾಧ್ಯಕ್ಷರು, ಧಾರವಾಡ
ತಸ್ಮಿಯ ತಳವಾಡ ಮಹಿಳಾ ಘಟಕ ಧಾರವಾಡ
ಇರ್ಷಾದ್ ಸಂಶಿ – ತಾಲೂಕು ಅಧ್ಯಕ್ಷರು, ಕುಂದಗೋಳ

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author