ಶಿವಮೊಗ್ಗ ಜಂಬೂ ಸವಾರಿ ವೇಳೆ ಗಲಿಬಿಲಿ.. ‘ಸೋಮಣ್ಣ’ ಆನೆಯಿಂದ ಕಾರು ಜಖಂ…ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ..
ಶಿವಮೊಗ್ಗ: ಜಂಬೂ ಸವಾರಿ ವೇಳೆ ಗಲಿಬಿಲಿ ಸೃಷ್ಟಿಸಿದ್ದ ‘ಸೋಮಣ್ಣ’ ಆನೆಯೊಂದು ಕಾರನ್ನು ಜಖಂಗೊಳಿಸಿರುವ ಘಟನೆ ಶಿವಮೊಗ್ಗದ ಕೋಟೆ ರಸ್ತೆಯಲ್ಲಿ ನಡೆದಿದ್ದು.
ಅಜ್ಜಿ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಬಳಿ ಬಂದ ಸೋಮಣ್ಣ ಆನೆ ಏಕಾಏಕಿ ರೌದ್ರಾವತಾರ ತಾಳಿದ್ದು, ಕಾರನ್ನು ತನ್ನ ಸೊಂಡಿಲು ಹಾಗೂ ದಂತಗಳಿಂದ ಜಖಂಗೊಳಿಸಿದೆ. ಈ ವೇಳೆ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಶಂಕರ್ ಎಂಬುವವರಿಗೆ ಸೇರಿದ ಕಾರು ಆನೆಯ ದಾಳಿಗೆ ಹಾನಿಗೊಳಗಾಗಿದ್ದು, ಇಡೀ ಘಟನೆ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸಿಸಿಟಿವಿ ದೃಶ್ಯದಲ್ಲಿ ಸೋಮಣ್ಣ ಆನೆ ಕಾರಿನ ಬಳಿ ಬಂದು ಅದನ್ನು ಜಖಂಗೊಳಿಸುತ್ತಿರುವ ದೃಶ್ಯ ಕಂಡುಬಂದಿದೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜಂಬೂ ಸವಾರಿ ವೇಳೆ ಆನೆ ಗಲಿಬಿಲಿಗೊಂಡಿದ್ದರಿಂದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ಆರಂಭವಾಗಿದೆ.
ಶಿವಮೊಗ್ಗದ ಕೋಟೆ ರಸ್ತೆಯಲ್ಲಿ ನಡೆದ ಈ ಘಟನೆ ಇದೀಗ ಭಾರೀ ಗಮನ ಸೆಳೆದಿದೆ.