ತಂದೆ ಪಡೆದ ಸಾಲ ವಾಪಸ್ ಕೊಡದಿದ್ದಕ್ಕೆ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ..!

Share to all

ಬೆಂಗಳೂರು:ತಂದೆ ಪಡೆದ ಸಾಲ ವಾಪಸ್ ಕೊಡದಿದ್ದಕ್ಕೆ ಆತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಜರುಗಿದೆ.  ಘಟನೆ ಸಂಬಂಧ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಮಾದನಾಯಕನಹಳ್ಳಿ ಪೊಲೀಸರಿಂದ ಅರೆಸ್ಟ್ ಮಾಡಲಾಗಿದೆ. 39 ವರ್ಷದ ರವಿಕುಮಾರ್ ಬಂಧಿತ ಆರೋಪಿ. ಆರೋಪಿ ರವಿಕುಮಾರ್ ಅಪ್ರಾಪ್ತ ಬಾಲಕಿ ತಂದೆಗೆ 70 ಸಾವಿರ ಹಣ ಸಾಲ ನೀಡಿದ್ದ. ಸಾಲ ಪಡೆದಿದ್ದ 70 ಸಾವಿರದ ಪೈಕಿ 40 ಸಾವಿರವನ್ನು ಬಾಲಕಿ ತಂದೆ ಹಿಂದುರಿಗಿಸಿದ್ದ.

ಬಾಲಕಿ ತಂದೆ ಇಲ್ಲದ ವೇಳೆ ಸಾಲ ಕೇಳುವ ನೆಪದಲ್ಲಿ ಮನೆಗೆ ಆರೋಪಿ ತೆರಳುತ್ತಿದ್ದ. ಸಾಲ ವಾಪಸ್ ಕೇಳುವ ನೆಪದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೇ ಅಪ್ರಾಪ್ತ ಬಾಲಕಿಗೆ ‍ಚುಂಬಿಸುವ ದೃಶ್ಯವನ್ನ ಆರೋಪಿ ಮೊಬೈಲಲ್ಲಿ ಸೆರೆಹಿಡಿದುಕೊಂಡಿದ್ದ. ಪೊಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡೊದಾಗಿ ಬೆದರಿಸಿ ಅತ್ಯಾಚಾರ ಎಸಗಿರೋ ಆರೋಪ ಕೇಳಿಬಂದಿದೆ. ಪೊಕ್ಸೊ ಪ್ರಕರಣ ದಾಖಲಿಸಿಕೊಂಡು ಆರೋಪಿ ರವಿಕುಮಾರ್ ನನ್ನು ಬಂಧಿಸಲಾಗಿದೆ.


Share to all

You May Also Like

More From Author