ನೀವು ಬೆಂಗಳೂರಲ್ಲಿ JOB ಸರ್ಚ್ ಮಾಡ್ತಿದ್ದೀರಾ!? ಹಾಗಿದ್ರೆ ಇಲ್ಲಿದೆ ಉದ್ಯೋಗ, ಕೈ ತುಂಬಾ ಸಂಬಳ- ಬೇಗ ಅಪ್ಲೈ ಮಾಡಿ!

Share to all

ನೀವು ಬೆಂಗಳೂರಿನಲ್ಲಿ JOB ಸರ್ಚ್ ಮಾಡ್ತಿದ್ದೀರಾ!? ಹಾಗಿದ್ರೆ ಈ ಸುದ್ದಿ ಗಮನದಲ್ಲಿಟ್ಟುಕೊಂಡು ನೋಡಿ. ಇಲ್ಲಿನ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ಖಾಲಿ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಆಸಕ್ತ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಇರಲಿದ್ದು, ನವೆಂಬರ್ 10 ರೊಳಗೆ ಅರ್ಜಿ ಸಲ್ಲಿಸಬಹುದು.

ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ಒಂದು ಕಾರ್ಯದರ್ಶಿ ಹುದ್ದೆ ಖಾಲಿ ಇದೆ. ಈ ಹುದ್ದೆಗೆ ಅರ್ಹ ಆಸಕ್ತರು ಕೂಡಲ ಅರ್ಜಿಯನ್ನು ಹಾಕಬೇಕು. ಅಭ್ಯರ್ಥಿಗಳಿಗೆ ಆನ್​ಲೈನ್ ಹಾಗೂ ಆಫ್​ಲೈನ್ ಎರಡರಲ್ಳೂ ಅರ್ಜಿ ಸಲ್ಲಿಕೆ ಅವಕಾಶ ನೀಡಲಾಗಿದೆ.

ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ- ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ

ಹುದ್ದೆ ಹೆಸರು: ಕಾರ್ಯದರ್ಶಿ

ಒಟ್ಟು ಹುದ್ದೆ: ಒಂದು

ಪೋಸ್ಟಿಂಗ್: ಬೆಂಗಳೂರು

ಮಾಸಿಕ ವೇತನ: ರೂ.1 ಲಕ್ಷದಿಂದ 2.60 ಲಕ್ಷ ರೂ.ವೇತನ

ಅರ್ಜಿ ಸಲ್ಲಿಕೆ ಕೊನೆ ದಿನ: ನವೆಂಬರ್ 10

ವಿದ್ಯಾರ್ಹತೆ ಏನಿರಬೇಕು?
ಅರ್ಜಿ ಸಲ್ಲಿಸಲಿರುವ ಅರ್ಹ ಅಭ್ಯರ್ಥಿಗಳು ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಲ್ಲಿ ಪದವಿ ಕೋರ್ಸ್‌ನಲ್ಲಿ ಉತ್ತೀರ್ಣಗೊಂಡಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಇಂತವರು ಮಾತ್ರವೇ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲಿ ಶಾರ್ಟ್ ಲಿಸ್ಟ್ ಆದವರಿಗೆ ನಂತರ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಿ ಮಾಸಿಕ ತಿಂಗಳಿಗೆ 1 ಲಕ್ಷ ರೂಪಾಯಿಯಿಂದ 2.60 ಲಕ್ಷ ರೂಪಾಯಿವರೆಗೆ ವೇತನ ನೀಡಲಾಗುವುದು ಎಂದು ಅಧಿಸೂಚನೆ ತಿಳಿಸಿದೆ.


Share to all

You May Also Like

More From Author