ಹುಬ್ಬಳ್ಳಿ ಪೋಲೀಸರು ಕಲೆಕ್ಸನ್ ದಂಧೆಯಲ್ಲಿ ಬ್ಯುಸಿ ಅಂತೆ..ರೊಕ್ಕ ಕಲೆಕ್ಟ ಮಾಡೋದು..ದುಡ್ಡು ಹೊಡೆಯೋರಂತೆ.

Share to all

ಹುಬ್ಬಳ್ಳಿ ಪೋಲೀಸರು ಕಲೆಕ್ಸನ್ ದಂಧೆಯಲ್ಲಿ ಬ್ಯುಸಿ ಅಂತೆ..ರೊಕ್ಕ ಕಲೆಕ್ಟ ಮಾಡೋದು..ದುಡ್ಡು ಹೊಡೆಯೋರಂತೆ.

ಹುಬ್ಬಳ್ಳಿ:- ಅಬ್ಬಾ ಹುಬ್ಬಳ್ಳಿ ಪೋಲೀಸರ ಕಲೆಕ್ಸನ್ ದಂಧೆ ಬಗ್ಗೆ ಸಾರ್ವಜನಿಕರು ಮಾತಾಡೋ ಹಂಗಿಲ್ಲಾ..ಯಾಕೆಂದರೆ ಜನರಿಗೆ ಪೋಲೀಸರ ಭಯ..ಹಾಗಾಗಿ ಇಡೀ ಹುಬ್ಬಳ್ಳಿಯಾದ್ಯಂತ ಎಲ್ಲಾರಿಗೂ ಈ ಕಲೆಕ್ಸನ್ ದಂಧೆ ಗೊತ್ತ ಇದ್ದರೂ ಗಪ್ಪ್ ಚುಪ್ಪ್..

ಈಗ ಈ ಹುಬ್ಬಳ್ಳಿ ಪೋಲೀಸರ ಬಗ್ಗೆ ಸ್ವತಃ ಶಾಸಕ ಅರವಿಂದ ಬೆಲ್ಲದ ಅವರು ಗಂಭೀರ ಆರೋಪ ಮಾಡಿದ್ದಾರೆ.ಹುಬ್ಬಳ್ಳಿ ಪೋಲೀಸರು ಸೀರಿಯಸ್ ಅಲಿಗೇಷನ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲಾ.ಅವರು ಕಲೆಕ್ಸನ್ ದಂಧೆದಾಗ ಅದಾರ..ರೊಕ್ಕ ಕಲೆಕ್ಟ ಮಾಡೋದು ಹೆಂಗ.ಎಲ್ಲಿಂದ ರೊಕ್ಕ ಹುಡುಕಬೇಕು.ಸಮಾಜಘಾತುಕ ಶಕ್ತಿಗಳಿಂದ ದುಡ್ಡು ಹೊಡೆಯೋದು ಹೆಂಗೆ ಅನ್ನೋದರಲ್ಲಿ ತಲ್ಲೀನರಾಗಿದ್ದಾರೆ ಅಂತಾ ಆರೋಪ ಮಾಡಿದ್ದಾರೆ.

ಹೌದು ಶಾಸಕರು ಹೇಳದಂಗೆ ಕಳೆದ ಮಂಗಳವಾರ ಘಂಟಿಕೇರಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಸರಾಯಿ ರೇಡ್ ನಲ್ಲಿ ನಡೆದಿರುವುದು ಅದೇ ಅಂತೆ..ರೇಡ್ ಆಗಿ ಒಂದು ವಾರದ ಸನಿಹಕ್ಕೂ ಬಂದರೂ ಆ ಸರಾಯಿ ಎಲ್ಲಿಂದ ಬಂತು ಅನ್ನೋದನ್ನ ತಿಳಿಯಲಿಕ್ಕೆ ಅಬಕಾರಿ ಇಲಾಖೆಗೆ ಪತ್ರ ಬರದಿದ್ದಾರಂತೆ.

ಆ ಅಕ್ರಮ ಸರಾಯಿ ಎಲ್ಲಿಂದ ಬಂತು ಅಂತಾ ತಿಳಿಯಲಿಕ್ಕೆ ಪತ್ರ ಬರೆದಿರುವ ಘಂಟಿಕೇರಿ ಇನ್ಸ್ಪೆಕ್ಟರ್ ಅವರ ಹೇಳಿಕೆ ಹಾಸ್ಯಾಸ್ಪದ.. ಬಾರ್ ಅಂಗಡಿಯ ಮಾಲಿಕನ ಜೊತೆ ಯಾರ್ಯಾರು ಎಷ್ಟು ಘಂಟೆ ಮಾತುಕತೆ ನಡೆಸಿದರು ಅಂತಾ ಗೊತ್ತಿಲ್ವಾ ಸಾಹೇಬ್ರೇ.

ಆ ಒಂದು ಅಕ್ರಮ ಸರಾಯಿ ಪ್ರಕರಣದಲ್ಲಿ ಯಾವಾಗ ಆ ವೈನ್ ಶಾಪ್ ಅಂಗಡಿಯ ಮಾಲಿಕನ ಮೇಲೆ ದೂರು ದಾಖಲು ಮಾಡಿಕೊಳ್ಳತಾರೆ ಕಾದು ನೋಡಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author