ತುತ್ತು ಅನ್ನ ಅರಸಿ ಬಂದ ಕಾರ್ಮಿಕರನ್ನು ಬಿಡದ ಜವರಾಯ..ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ಮೃತ ದೇಹಗಳು…
ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಆಯಿಲ್ ತುಂಬಿದ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಸ್ಥಳದಲ್ಲಿ ನಾಲ್ವರು ಸಾವಿಗೀಡಾಗಿರುವ ಘಟನೆ ಇಟಗಿ ಕ್ರಾಸ್ ಬಳಿ ಸಂಭವಿಸಿದೆ.
ಟ್ಯಾಂಕರ್ನ ಜಾಯಿಂಟ್ ಕಟ್ ಆಗಿ ನಿಯಂತ್ರಣ ತಪ್ಪಿದೆ. ಆಗ ಹೈವೇ ಮಧ್ಯದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆರಗಿದ ಟ್ಯಾಂಕರ್ ಪಲ್ಟಿಯಾಗಿದೆ.
ಮೃತರನ್ನು ಕಲಬುರ್ಗಿ ಜಿಲ್ಲೆಯ ರಾಮಣ್ಣ..ಮಹೇಶ…ರಾಮಚಂದ್ರ ಎಂದು ಗುರುತಿಸಲಾಗಿದೆ.ಲಕ್ಷ್ಮೀಬಾಯಿ..ಅನಶ್ರೀ..ಭೀಮಾಬಾಯಿಗೆ ಗಂಭೀರಗಾಯಗಳಾಗಿದ್ದು ಅವರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.