ಜಿಲ್ಲಾ ಉಸ್ತುವಾರಿ ಸಚಿವರೇ ಇದು ನಿಮ್ಮ ಗಮನಕ್ಕೆ..8 ವರ್ಷಗಳಿಂದ ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿಯೇ ಠಿಕಾಣಿ..ಸಚಿವರಿಗೆ ಮನವಿ ಸಲ್ಲಿಸಲಿರುವ ಕನ್ನಡಪರ ಸಂಘಟನೆಗಳು…
ಹುಬ್ಬಳ್ಳಿ-ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಂದರೆ ಹೇಳೋರಿಲ್ಲಾ..ಕೇಳೋರಿಲ್ಲಾ.ಅನ್ನೋ ಹಾಗಾಗಿದೆ.ಇಲ್ಲೊಬ್ಬ ಅಧಿಕಾರಿ ಒಂದಲ್ಲಾ …ಎರಡಲ್ಲಾ.. ಆರು ಹುದ್ದೆಗಳನ್ನು ಮುಡಿಗೇರಿಸಿಕೊಂಡು ಎಂಟು ವರ್ಷಗಳಿಂದ ಇಲ್ಲೇ ಕೂತಿದ್ದಾನೆ ಅಂದರೆ ಏನರ್ಥ…
ಸರಕಾರ ಎರಡು ವರ್ಷ ಒಂದೇ ಕಡೆ ಕೆಲಸ ಮಾಡಿರುವವರನ್ನು ಪಟ್ಟಿ ಮಾಡಿ ಪ್ರತಿವರ್ಷ ವರ್ಗಾವಣೆ ಮಾಡುವ ಉದ್ದೇಶ ಬ್ರಷ್ಟಾಚಾರ ತಡಯಲು ಅನ್ನೋ ಮಾತಿದೆ.ಆದರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಎಂಟು ವರ್ಷದಿಂದ ಕೀ ಪೋಸ್ಟನಲ್ಲಿರುವ ವಿಜಯಕುಮಾರ ಅವರ ವರ್ಗಾವಣೆ ಯಾಕಿಲ್ಲಾ ಅನ್ನೋ ಮಾತು ಕೇಳಿ ಬರತೀದೆ.
ತಿಂಗಳಿಗೊಮ್ಮೆ ಮೀಟಿಂಗ್ ಕರೆದು ಪಾಲಿಕೆಯವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಾಹೇಬ್ರಿಗೂ ಈ ವಿಜಯಕುಮಾರನ ವಿಜಯೋತ್ಸವ ಗೊತ್ತಿಲ್ಲಾ ಅನ್ಸುತ್ತೇ.
ಸಚಿವರು ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಮಾಹಿತಿ ಪಡೆದರೆ ಗೊತ್ತಾಗುತ್ತೇ ಎಷ್ಟು ಅಧಿಕಾರಿಗಳು ಎಷ್ಟೆಷ್ಟು ಕುರ್ಚಿಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿದ್ದಾರೆ ಅನ್ನೋದು.
ಒಂದು ಹುದ್ದೆ ಪಡೆಯಬೇಕಾದರೇ ಹರಸಾಹಸ ಪಡಬೇಕಾದ ಕಾಲದಲ್ಲಿ ಎಂಟು ಹುದ್ದೆಗಳನ್ನು ಬಗಲಲ್ಲಿ ಇಟ್ಟುಕೊಂಡಿರುವ ವಿಜಯಕುಮಾರ ಅವರ ಬಗ್ಗೆ ಕನ್ನಡ ಪರ ಸಂಘಟನೆಗಳು ಸಚಿವ ಲಾಡ್ ಅವರಿಗೆ ಮನವಿ ನೀಡಲು ಮುಂದಾಗಿದ್ದಾರೆ. ಸಚಿವರು ವಿಜಯಕುಮಾರ ಅವರ ಬಗ್ಗೆ ಯಾವ ಕ್ರಮಕೈಕೊಳ್ಳತಾರಾ ಕಾದು ನೋಡಬೇಕಾಗಿದೆ.