ಬೆಂಡಿಗೇರಿ ಅಕ್ಕಿ ಪ್ರಕರಣ…ತುಟಿ ಪಿಟಕ್ ಎನ್ನದ ಖಡಕ್ ಪೈರಿಂಗ್ ಸ್ಪೆಷಲಿಸ್ಟ್..!!!ಭಲೇ ಪಿಸ್ತೂಲ ಬಾಬಾ…!!!
ಹುಬ್ಬಳ್ಳಿ:-ಹೌದ್ರೀ ಕಳೆದ ಬುಧವಾರ ಹುಬ್ಬಳ್ಳಿಯ ಬೆಂಡಿಗೇರಿ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ 54 ಟನ್ ತುಂಬಿದ ಎರಡು ಲಾರಿ ರೇಷನ್ ಅಕ್ಕಿ ಕಳ್ಳ ಸಾಗಾಟ ಪ್ರಕರಣ ದಾಖಲಾಗಿತ್ತು.ಪ್ರಕರಣ ದಾಖಲಾಗಿ ಎರಡು ವಾರ ಕಳೆದರೂ ಆರೋಪಿ ಯಾರು.? ಎಲ್ಲಿಂದ ಅಕ್ಕಿ ಬಂತು..? ಅವರಿಗೆ ಯಾರು. ಕೊಡತಿದ್ದರೂ ಏನೂ ಇಲ್ಲಾ…ಎಲ್ಲಾ ಶೂನ್ಯ…!

ಒಂದಲ್ಲಾ… ಎರಡಲ್ಲಾ… ಹತ್ತು ವ್ಹೀಲನ ಎರಡು ಲಾರಿ ಅಕ್ಕಿ ಪ್ರಕರಣ ನೋಡತಾ ಹೋದರೆ ಏನೆಲ್ಲಾ ನಡೀತಾ ಇದೆ ಅನ್ನೋ ಗುಮಾನಿ ಮೂಡಿ ಬರತಾ ಇದೆ.ಬೆಂಡಿಗೇರಿ ಠಾಣೆಯ ಪೋಲೀಸರು ಹುಬ್ಬಳ್ಳಿಯಿಂದ ಹಾವೇರಿಗೆ ದಂಡು ಕಟ್ಟಿಕೊಂಡು ಹೋಗಿ ಆರೋಪಿ ಪೋನ್ ಸ್ವಿಚ್ಡ್ ಆಪ್ ರೀ ಅಂತಾ ಯಾಲಕ್ಕಿ ತಿಂದು ಮರಳಿ ಬಂದರಾ…?
ದಿನ ನಿತ್ಯ ರಾಜಾ ರೋಷವಾಗಿ ಹಾವೇರಿ ಮತ್ತು ಗಂಗಿವಾಳ ಸೇರಿದಂತೆ ಹಲವೆಡೆಯಿಂದ ರಿಂಗ್ ರೋಡನಲ್ಲಿ…ರೇಷನ್ ಅಕ್ಕಿ ಹೋದರೂ ಅವುಗಳನ್ನು ಹಿಡಿದುಕೊಡಲು ಹೊರಗಿನ ಜನರೇ ಬೇಕಾಯಿತಾ…ಆದರೆ ಹುಬ್ಬಳ್ಳಿ ಪೋಲೀಸರು ಮಾತ್ರ ಸಣ್ಣಪುಟ್ಟ ಕೇಸ್ ಮಾಡುವುದರಲ್ಲಿ ಬ್ಯೂಸಿ ಯಾಗಿದ್ದಾರೆ ಅಂತಾ ಕಾಣುತ್ತೇ..
ಕಳೆದ ಬುಧವಾರ ಎರಡು ಲಾರಿ ಸಿಕ್ಕ 24 ಘಂಟೆ ನಡೆದ ಹೈ ಡ್ರಾಮಾದಲ್ಲಿ ಅದೇ ಪಿಸ್ತೂಲ್ ಬಾಬಾ ಹುಬ್ಬಳ್ಳಿಯ ಇನ್ನೊಬ್ಬ ಸದ್ದಿಲ್ಲದೇ ಸದ್ದು ಮಾಡುತ್ತಿರುವ ಸದ್ದಣ್ಣ ಅಕ್ಕಿ ಕಿಂಗ್ ಪಿನ್ ಎಂಟ್ರಿ ಕೊಟ್ಟು ಏನೆಲ್ಲಾ ಡೀಲ್ ಗೆ ಮುಂದಾಗಿದ್ದರೂ ಅದು ಜಗಜ್ಜಾಹೀರಾಗಿದೆ.
ಕಳೆದ ಎರಡ್ಮೂರು ತಿಂಗಳ ಹಿಂದೆ ಕಸಬಾ ಪೋಲೀಸ ಠಾಣಾ ವ್ಯಾಪ್ತಿಯಲ್ಲಿ ಆಹಾರ ಇಲಾಖೆಯವರು ಹೋಗೋ ಮೊದಲೇ ಪೋಲೀಸರು ಹೋಗಿ ಅಂಗನವಾಡಿ ಮಕ್ಕಳಿಗೆ ಪೋರೈಕೆಯಾಗುತ್ತಿದ್ದ ಪದಾರ್ಥಗಳ ಮೇಲೆ ರೇಡ್ ಮಾಡಿ..ಪ್ರಕರಣವನ್ನ ಒಂದೆರಡು ಘಂಟೆಯೊಳಗೆ ಸಿಸಿಬಿ ಕೊಟ್ಟು,,ಆರೋಪಿಯ ಪತ್ತೆಗಾಗಿ ಎರಡೆರಡು ಟೀಂ ಮಾಡಿ ಹೊರ ರಾಜ್ಯಕ್ಕೆ ಕಳಿಸಿ..ಹುಬ್ಬಳ್ಳಿಯಲ್ಲಿ ಅವರೂ ಇವರೂ ಅಂತಾ ಮೂವತ್ತಕ್ಕೂ ಹೆಚ್ಚು ಜನರನ್ನು ತಂದು ವಿಚಾರಣೆ ಮಾಡಿ…ಕೇಸೂ ಮಾಡಿದರಲ್ಲಾ ಕಮೀಷನರ್ ಸಾಹೇಬ್ರೇ..
