ಪಿಸ್ತೂಲ ಬಾಬಾ ಹಾಗೂ ಒಂಬತ್ತು ಸಹಚರರು ಆರೆಸ್ಟ್ .. ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಸಚಿನ್ ಕಬ್ಬೂರ..

Share to all

ಪಿಸ್ತೂಲ ಬಾಬಾ ಹಾಗೂ ಒಂಬತ್ತು ಸಹಚರರು ಆರೆಸ್ಟ್ ..
ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಸಚಿನ್ ಕಬ್ಬೂರ..

ಹುಬ್ಬಳ್ಳಿ:-ಹೌದು ಪಡಿತರ ಅಕ್ಕಿ ದಂಧೆ ಅಂದರೆ ಹುಬ್ಬಳ್ಳಿ ಮತ್ತು ಹಾವೇರಿಯಲ್ಲಿ ದೊಡ್ಡ ಆಲದ ಮರವಾಗಿ ಬೆಳೆದು ನಿಂತಿದೆ.ಆ ಆಲದ ಮರಕ್ಕೆ ಪೋಲೀಸರು ಕೈ ಹಾಕಿದರೆ ಸಾಕು ಅವರನ್ನು ಆ ಪೋಲೀಸ ಠಾಣೆಯಿಂದಲೇ ಎತ್ತಂಗಡಿ ಮಾಡಿಸೋ‌ ಮಟ್ಟಿಗೆ ಈ ದಂಧೆಕೋರರು ಬೆಳೆದು ನಿಂತಿದ್ದಾರೆ..

ಅಂತಹ ಆಲದ ಮರದ ಬುಡಕ್ಕೆ ಕೈ ಹಾಕಿದ್ದ ಹುಬ್ಬಳ್ಳಿಯ ಬೆಂಡಿಗೇರಿ ಇನ್ಸ್ಪೆಕ್ಟರ್ ನಾಯಕ ಹಾಗೂ ಪಿಎಸ್ ಆಯ್ ರವಿ ವಡ್ಡರ ಹಾವೇರಿಯ ಆಲದ ಮರ..ಪಿಸ್ತೂಲ್ ಬಾಬಾ..ಸಚಿನ್ ಕಬ್ಬೂರ ಕೋಟೆಯನ್ನು ಛಿದ್ರ..ಛಿದ್ರ ಮಾಡಿದ್ದಾರೆ.

ಅಷ್ಟೇ ಅಲ್ಲದೇ ಸಚಿನ ಕಬ್ಬೂರ ಅಕ್ರಮ ಅಕ್ಕಿ ದಂಧೆಯ ಜಾಲದಲ್ಲಿದ್ದ ಒಂಬತ್ತು ಮಂದಿಯನ್ನ ಜೈಲಿಗಟ್ಟಿ ಹತ್ತನೇ ಆರೋಪಿ ಅಕ್ರಮ ಅಕ್ಕಿ ಕಿಂಗ್ ಪಿನ್ ಸಚಿನ್ ಕಬ್ಬೂರನನ್ನು ಜೈಲಿಗಟ್ಟಿ ಆಡೋರ ಬಾಯಿಗೆ ಬೀಗ ಹಾಕಿದ್ದಾರೆ ಇನ್ಸ್ಪೆಕ್ಟರ್ ನಾಯಕ ಸಾಹೇಬ್ರು..ಅಲ್ಲದೇ ಹತ್ತು ಗಾಡಿಗಳನ್ನು ಸೀಜ್ ಮಾಡಿದ್ದಾರೆ.

ಮಾಡಿದ್ದುಣ್ಣೋ ಮಾರಾಯಾ ಎಂಬಂತೆ ಪಿಸ್ತೂಲ್ ಬಾಬಾ ಸಚಿನ್ ಕಬ್ಬೂರ ಈಗ ಮಾಡಿದ ತಪ್ಪಿಗೆ ಹುಬ್ಬಳ್ಳಿಯ ಜೈಲಿನಲ್ಲಿ ಮೂರು ದಿನದಿಂದ ಮುದ್ದೆ ಮುರಿಯುತ್ತಿದ್ದಾನೆ…

ಕೋಟ್ಯಾಧಿಪತಿ..ಪಿಸ್ತೂಲ್ ಬಾಬಾ..ಅಕ್ರಮ ಅಕ್ಕಿ ದಂಧೆಯ ಕಿಂಗ್ ಪಿನ್ ಕೊನೆಗೆ ಆರೆಸ್ಟ್ ಆದನಾ..ಅಲ್ಲೂ ತನ್ನ ರುಬಾಬಗಿರಿ ತೋರಿಸಿದನಾ ಇನ್ನಷ್ಟು ಡಿಟೇಲ್ಸ್ ವೀಕ್ಷಿಸಿ ನಿಮ್ಮ ಉದಯ ವಾರ್ತೆಯಲ್ಲಿ..

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author