ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಉಪ ಆಯುಕ್ತರಾಗಿ (ಆಡಳಿತ) ಮಹಿಳಾ ಕೆಎಎಸ್ ಆಪೀಸರ್

Share to all

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಉಪ ಆಯುಕ್ತರಾಗಿ (ಆಡಳಿತ) ಮಹಿಳಾ ಕೆಎಎಸ್ ಆಪೀಸರ್..

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಉಪ ಆಯುಕ್ತರಾಗಿ ಕಿರಿಯ ಶ್ರೇಣಿಯ ಕೆಎಎಸ್ ಆಪೀಸರ್ ಅನುರಾಧಾ ವಸ್ತ್ರದ ಅವರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ಅನುರಾಧಾ ವಸ್ತ್ರದ (ಹಿರೇಮಠ) ಅವರು ಈ ಹಿಂದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಮೀಷನರ್ ಆಗಿ ಕಾರ್ಯನಿರ್ವಹಿಸಿದ್ದ ಮೇಜರ್ ಸಿದ್ದಲಿಂಗಯ್ಯ ಅವರ ಧರ್ಮಪತ್ನಿ ಆಗಿದ್ದು ವಿಶೇಷ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಆಡಳಿತ) ಹುದ್ದೆಯನ್ನು ಶಂಕರಾನಂದ ಬನಶಂಕರಿ ಅವರಿಗೆ ಚಾಜ್೯ ಕೊಡಲಾಗಿತ್ತು.ಅಕೌಂಟ್ಸ್ ಆಪೀಸರ್ ಆಗಿದ್ದ ಶಂಕರಾನಂದ ಬನಶಂಕರಿ ಅವರಿಗೆ ಆ ಚಾಜ್೯ ನೀಡಿದ್ದಕ್ಕೆ ಹಲವರಿಗೆ ಅಸಮಾಧಾನವೂ ಆಗಿತ್ತು.

ಈಗ ಆ ಹುದ್ದೆಗೆ ಅನುರಾಧಾ ವಸ್ತ್ರದ ಅವರ ನೇಮಕ ಹಲವು ಅಧಿಕಾರಿಗಳಿಗೆ ಖುಷಿಯಾಗಿದ್ದಂತೂ ನಿಜ.ಇನ್ಮುಂದೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಕೆಲ ಅಘೋಷಿತ ಕೆಎಎಸ್ ಆಪೀಸರ್ ಮತ್ಯಾವ ಆಟ ಹೂಡತಾರೆ ಕಾದು ನೋಡ ಬೇಕಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author