ಹುಬ್ಬಳ್ಳಿ ಗ್ರಾಮೀಣ ಪೋಲೀಸರ ಕಾರ್ಯಾಚರಣೆ…ಅಕ್ರಮ ಗೋವಾ ಮದ್ಯ ವಶ..

Share to all

ಹುಬ್ಬಳ್ಳಿ ಗ್ರಾಮೀಣ ಪೋಲೀಸರ ಕಾರ್ಯಾಚರಣೆ…ಅಕ್ರಮ ಗೋವಾ ಮದ್ಯ ವಶ..

ಹುಬ್ಬಳ್ಳಿ:- ಟಾಟಾ ಎಸ್ ವಾಹನದಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ ಕಡೆಯಿಂದ ಕುಸುಗಲ್ ಮಾರ್ಗವಾಗಿ ಹೋಗುತ್ತಿದ್ದ ಟಾಟಾ ಎಸ್ ಗಾಡಿಯನ್ನು ಕುಸುಗಲ್ ಗ್ರಾಮದ ಬಳಿ ತಪಾಸಣೆ ಮಾಡಿದಾಗ ಅದರಲ್ಲಿ ಗೋವಾದಲ್ಲಿ ಮಾರಾಟಕ್ಕೆ ಮಾತ್ರ ಎಂದು ಬರೆಯಲಾಗಿದ್ದ ಸರಾಯಿ ಬಾಟಲಿಗಳು ಸಿಕ್ಕ ಹಿನ್ನೆಲೆಯಲ್ಲಿ ಸಾಗಾಟಕ್ಕೆ ಬಳಸಿದ ಗಾಡಿ..ಗೋವಾ ಮದ್ಯ ಹಾಗೂ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿತರನ್ನು ಗಜೇಂದ್ರಗಡ ತಾಲೂಕಿನ ಶಾಂತಗೇರಿ ಗ್ರಾಮದ ಕನಕಪ್ಪ…ಪರಶುರಾಮ.. ಸಂಗಪ್ಪ ಎಂದು ಗುರುತಿಸಲಾಗಿದೆ.ಪ್ರಕರಣ ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಯಲ್ಲಿ ದಾಖಲಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ..


Share to all

You May Also Like

More From Author