ಹುಬ್ಬಳ್ಳಿಯಲ್ಲಿ ಕಟೌಟ್ ನೆಲಕ್ಕೆ…ತಪ್ಪಿದ ಭಾರೀ ದುರಂತ..ನಾಲ್ವರಿಗೆ ಗಾಯ..

Share to all

ಹುಬ್ಬಳ್ಳಿಯಲ್ಲಿ ಕಟೌಟ್ ನೆಲಕ್ಕೆ…ತಪ್ಪಿದ ಭಾರೀ ದುರಂತ..ನಾಲ್ವರಿಗೆ ಗಾಯ..

ಹುಬ್ಬಳ್ಳಿ:- ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ನಡೆಯಲಿರುವ ಮನೆಗಳ ಹಂಚಿಕೆ ಕಾರ್ಯಕ್ರಮದ ವೇದಿಕೆ ಬಳಿ ಬೃಹತ್ ಕಟೌಟೊಂದು ಮುರಿದು ಬಿದ್ದು ಆಗಬಹುದಾದ ದೊಡ್ಡ ದುರಂತ ತಪ್ಪಿದೆ.

ಕಾಂಗ್ರೆಸ್ ನಾಯಕರ ಪೋಟೋ ಇರುವ ಬೃಹತ್ ಕಟೌಟ್ ಮುರಿದು ಬಿದ್ದ ಕಾರಣಕ್ಕೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು.ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಯಕ್ರಮದ ಉಸ್ತುವಾರಿಗೆ ಇದ್ದಂತಹ ಕೆಲವು ಅಧಿಕಾರಿಗಳೂ ಸಹ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎನ್ನಲಾಗಿದೆ.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author