ನುಡಿದಂತೆ ನಡೆದ ಕಾಂಗ್ರೆಸ್ ಯಾತ್ರೆ..ರಾಜ್ಯಕ್ಕೆ ಮಾದರಿಯಾದ ರಜತ್ ಕಾರ್ಯಕ್ರಮ..

Share to all

ನುಡಿದಂತೆ ನಡೆದ ಕಾಂಗ್ರೆಸ್ ಯಾತ್ರೆ..ರಾಜ್ಯಕ್ಕೆ ಮಾದರಿಯಾದ ರಜತ್ ಕಾರ್ಯಕ್ರಮ..

ಹುಬ್ಬಳ್ಳಿ:- ಹೌದು ರಾಜ್ಯದಲ್ಲಿ ಕಾಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷದ ಸಂಬ್ರಮಕ್ಕೆ ಸನಿಹ ಬಂದಿದೆ.ಅಂತಹ ಸಂದರ್ಭದಲ್ಲಿ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದು ಎಲ್ಲರಿಂದಲೂ ಮೆಚ್ಚುಗೆ ಪಡೆದಿದೆ..

ಬಡವರಿಗಾಗಿ ಗೃಹ ಜ್ಯೋತಿ..ಮಹಿಳೆಯರಿಗೆ ಉಚಿತ ಸಾರಿಗೆ..ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.ಈ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಸೆಂಟ್ರಲ್ ವಿಧಾನಸಭಾ ಕ್ಷೇತ್ರಗಳ ವಿವಿಧ ವಾಡ್೯ಗಳಲ್ಲಿ ವಿವಿರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಂದಿಗೆ ಆ ಕಾರ್ಯಕ್ರಮ ಹತ್ತನೇ ದಿನಕ್ಕೆ ಕಾಲಿಟ್ಟಿದೆ.

ರಾಜ್ಯದಲ್ಲಿಯೇ ಫಸ್ಟ್ ಟೈಮ್ ನುಡಿದಂತೆ ನಡೆದ ಸರಕಾರದ ಕುರಿತು ಜನರಿಗೆ ಮನದಟ್ಟು ಮಾಡಿಕೊಡಲು ಅಭಿಯಾನ ಆರಂಭಿಸಿರುವ ರಜತ್ ಉಳ್ಳಾಗಡ್ಡಿಮಠ ಪ್ರತಿಪಕ್ಷ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.ಬಡವರ ಬದುಕು ಕಟ್ಟಿಕೊಟ್ಟಿರುವ ಯೋಜನೆಗಳನ್ನೇ ವಿರೋಧಿಸುತ್ತಿರುವ ಪ್ರತಿಪಕ್ಷಗಳು ವಿರೋಧಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಉದಯ ವಾರ್ತೆ
ಹುಬ್ಬಳ್ಳಿ.


Share to all

You May Also Like

More From Author