ಬೌದ್ಧ ಲಾಮಾ ಕೊಲೆ ಪ್ರಕರಣ..ಹಂತಕರನ್ನು ಬಂಧಿಸಿದ ಪೋಲೀಸರು…
ಧಾರವಾಡ:-ಕಳೆದ ಎಪ್ರೀಲ್ 29 ರಂದು ಟಿಬೇಟಿಯನ್ ಕ್ಯಾಂಪಿನ ತಾಶಿ ದೊಂದುಪ ಎಂಬಾತನನ್ನು ಕೊಲೆ ಮಾಡಿ,ಕೈಕಾಲು ಕಟ್ಟಿ ಧಾರವಾಡ ಹೊರವಲಯದಲ್ಲಿ ಶವ ಎಸೆದು ಹೋಗಿದ್ದ ಹಂತಕರನ್ನು ಧಾರವಾಡ ಪೋಲೀಸರು ಬಂಧಿಸಿದ್ದಾರೆ.
ಬೌದ್ದ ಲಾಮಾನ ಬಳಿ ಹಣ ಇದೆ ಎಂದು ಮಹಾರಾಷ್ಟ್ರದ ಕಬ್ಬು ಕಟಾವ ಗ್ಯಾಂಗು ಲಾಮಾನನ್ನು ಕಿಡ್ನ್ಯಾಪ್ ಮಾಡಿ ಹಣ ಇಲ್ಲಾ ಎಂದು ಗೊತ್ತಾಗಿ ಕೊಲೆ ಮಾಡಿ ಶವವನ್ನು ಕಾರಿನಲ್ಲಿ ಇಟ್ಟುಕೊಂಡು ಮಹಾರಾಷ್ಟ್ರ ದ ಕಡೆ ಹೊರಟಾಗ ಧಾರವಾಡ ಹೊರವಲಯದಲ್ಲಿ ಎಸೆದು ಹೋಗಿದ್ದಾರೆ..
ಬಂಧಿತರನ್ನು ಸಂಕೇತ ಯಾದವ್.ವೈಭವ ಚವ್ಹಾಣ.ಸಿದ್ದೇಶ ಬೂಸ್ಲೆ ಎಂದು ಗುರುತಿಸಲಾಗಿದೆ. ಇನ್ನುಳಿದ ಆರೋಪಿಗಳಿಗೆ ಧಾರವಾಡ ಪೋಲೀಸರು ಬಲೆ ಬೀಸಿದ್ದಾರೆ.