ಪೋಲೀಸ ಕಮೀಷನರ್ ಎತ್ತಂಗಡಿಗೆ ಕೌಂಟ್ ಡೌನ್..ರಿನೀವಲ್ ಕ್ಯಾನ್ಸಲ್..ಅವರ ಜೊತೆಗೆ ಇನ್ನಿಬ್ಬರು ಎತ್ತಂಗಡಿ..?
ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡದಲ್ಲಿ ಹಿಂದೆದೂ ಕಾಣದ..ಕೇಳದ ಪರಿಸ್ಥಿತಿ ನಿರ್ಮಾಣವಾಗಿದೆ ಅಂತಾ ಪಕ್ಷಾತೀತವಾಗಿ ಜನಪ್ರತಿನಿಧಿಗಳು ಹುಬ್ಬಳ್ಳಿ-ಧಾರವಾಡ ಪೋಲೀಸ ಕಮೀಷನರ್ ಸೇರಿ ಒಂದಿಬ್ಬರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದು ಅವರೆಲ್ಲರನ್ನೂ ಎರಡ್ಮೂರು ದಿನದಲ್ಲಿ ಎತ್ತಂಗಡಿ ಮಾಡೋದಾಗಿ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಕಮೀಷನರ್ ಕಛೇರಿಯಲ್ಲೇ ಇನಸ್ಪೆಕ್ಟರ್ ಒಬ್ಬರನ್ನ ಇಟ್ಟಕೊಂಡು ವಸೂಲಿ ದಂಧೆ ಮಾಡತಿದ್ದಾರೆ ಅಂತಾ ಆಡಳಿತ ಪಕ್ಷದ ಶಾಸಕರೇ ಗಂಭೀರ ಆರೋಪ ಮಾಡಿದ್ದು,ಅವರನ್ನೂ ಸೇರಿಸಿ ಎಲ್ಲರನ್ನೂ ಎರಡ್ಮೂರು ದಿನದಲ್ಲಿ ತೆಗೀತೇನಿ ಅಲ್ಲದೇ ಗನ್ ಲೈಸನ್ಸ್ ಸೇರಿದಂತೆ ಹಲವು ಪ್ರಕರಣಗಳು ತನಿಖೆಯೂ ಆಗಬೇಕು ಅಂತಾ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಪೋಲೀಸರಲ್ಲಿ ಮನುಷ್ಯತ್ವ..ಮಾನವೀಯತೆ ಅನ್ನೋದು ಸತ್ತು ಹೋಗಿದೆ..ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದರೆ ಯಾರೂ ನೋಡಿಯೇ ಇಲ್ಲಾ ಅಂದಕೊಂಡರೆ ತಪ್ಪು..ನಾನಂತೂ ಅಂತಹ ಅಧಿಕಾರಿಗಳನ್ನ ಯಾರನ್ನೂ ಉಳಿಸಂಗಿಲ್ಲಾ ಅಂತಾ ಖಡಕ್ ಎಚ್ಚರಿಕೆ ನೀಡಿದ್ದಾರೆ..
ಇನ್ನೂ ವಿಪಕ್ಷ ನಾಯಕ ಅರವಿಂದ ಬೆಲ್ಲದ ಅವರು ಕಮೀಷನರ್ ಮೇಲೆ ನೇರಾ ನೇರಾ ಗಂಭೀರ ಆರೋಪ ಮಾಡಿದ್ದೂ ಅಲ್ಲದೇ ಕ್ರಮಕೈಕೊಳ್ಳಲು ನೀಡಿದ್ದ ಎರಡು ದಿನದ ಗಡುವು ಮುಗಿದಿದ್ದು ಯಾವಾಗ ಬೀದಿಗೆ ಇಳಿದು ಹೋರಾಟ ಮಾಡೋದು ಅಂತಾ ಕಾದು ನೋಡಬೇಕಾಗಿದೆ