ಮದುವೆ ವಯಸ್ಸಿಗೆ ಬಂದ ಮಕ್ಕಳಿದ್ದಾರೆ…ನನಗೆ ಶಿಕ್ಷೆ ಕಡಿಮೆ ಕೊಡಿ ಎಂದು ಕಣ್ಣೀರಿಟ್ಟ ವಿನಯ ಕುಲಕರ್ಣಿ…

Share to all

ಮದುವೆ ವಯಸ್ಸಿಗೆ ಬಂದ ಮಕ್ಕಳಿದ್ದಾರೆ…ನನಗೆ ಶಿಕ್ಷೆ ಕಡಿಮೆ ಕೊಡಿ ಎಂದು ಕಣ್ಣೀರಿಟ್ಟ ವಿನಯ ಕುಲಕರ್ಣಿ…

ಬೆಂಗಳೂರು:-ಬಿಜೆಪಿ ಮುಖಂಡ ಯೋಗೀಶಗೌಡ ಅವರ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಶಾಸಕ ವಿನಯ ಕುಲಕರ್ಣಿ ಸೇರದಂತೆ 17 ಆರೋಪಿಗಳಿಗೆ ಇಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.ವಿಚಾರಣೆ ವೇಳೆ ಸಿಬಿಐ ಪರ ವಕೀಲರು ಇದೊಂದು ಅತ್ಯಂತ ಕ್ರೂರ ಹತ್ಯೆಯಾಗಿದೆ.ಎಲ್ಲಾ ದೋಷಿಗಳಿಗೂ ಗರಿಷ್ಠಮಟ್ಟದ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ವಾದಿಸಿದರು.ಸಿಬಿಐನ ಈ ವಾದದಿಂದ ಬೆಚ್ಚಿಬಿದ್ದ ಆರೋಪಿಗಳು ನ್ಯಾಯಾಧೀಶರ ಮುಂದೆ ಶಿಕ್ಷೆ ಕಡಿಮೆ ಮಾಡುವಂತೆ ಕಣ್ಣೀರಿಟ್ಟರು.

ಪ್ರಕರಣದ ಆರೋಪಿ ಶಾಸಕ ವಿನಯ ಕುಲಕರ್ಣಿ ತನ್ನ ರಾಜಕೀಯ ಜೀವನದಲ್ಲಿ ವೈಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲಾ..ಇದೊಂದು ರಾಜಕೀಯ ಪ್ರೇರಿತ ನನಗೆ ಇಬ್ಬರು ಮದುವೆ ವಯಸ್ಸಿಗೆ ಬಂದ ಮಕ್ಕಳಿದ್ದಾರೆ ಶಿಕ್ಷೆ ಕಡಿಮೆ ಮಾಡಿ ಎಂದು ಮನವಿ ಮಾಡಿದರು.ಇನ್ನುಳಿದಂತೆ ಎಲ್ಲಾ ಆರೋಪಿಗಳು ತಮ್ಮ ತಮ್ನ ವೈಕ್ತಿಕ ಸಮಸ್ಯೆಗಳನ್ನು ಹೇಳಿ ಶಿಕ್ಷೆ ಕಡಿಮೆ ಮಾಡಬೇಕೆಂದು ಮನವಿ ಮಾಡಿದರು..ಒಟ್ಟಾರೆ ಯೋಗೀಶಗೌಡ ಅವರ ಅಮಾನುಷ ಕೊಲೆಗೆ ನ್ಯಾಯಾಲಯ ಯಾವ ರೀತಿ ಶಿಕ್ಷೆ ವಿಧಿಸಲಿದೆ ಎಂಬುದು ಇಡೀ ರಾಜ್ಯದ ಜನರ ಕುತೂಹಲಕ್ಕೆ ಕಾರಣವಾಗಿದೆ.

ಉದಯ ವಾರ್ತೆ
ಬೆಂಗಳೂರು.


Share to all

You May Also Like

More From Author