ಆದಿತ್ಯಾ ಸುಸೈಡ್ ಪ್ರಕರಣ..ಗುಬ್ಬಿ ಮೇಲೆ ಬ್ರಹ್ಮಾಸ್ತ್ರಕ್ಕೆ ಸಜ್ಜು..! ಒನ್ ಸೈಡ್ ತನಿಖೆನಾ…ಒಬ್ಬ ವ್ಯಕ್ತಿ ಎರಡು ಸಾವಿರಕ್ಕೇ ಸುಸೈಡ್ ಮಾಡಿಕೊಳ್ಳಬಹುದಾ..?…?

Share to all

ಆದಿತ್ಯಾ ಸುಸೈಡ್ ಪ್ರಕರಣ..ಗುಬ್ಬಿ ಮೇಲೆ ಬ್ರಹ್ಮಾಸ್ತ್ರಕ್ಕೆ ಸಜ್ಜು..! ಒನ್ ಸೈಡ್ ತನಿಖೆನಾ…ಎರಡೇ ಸಾವಿರಕ್ಕೇ ಸುಸೈಡಾ…?

ಧಾರವಾಡ:- ಧಾರವಾಡದಲ್ಲಿ ನಡೆದ ಆದಿತ್ಯಾ ಸುಸೈಡ್ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಒನ್ ಸೈಡ್ ತನಿಖೆ ನಡೆಸುತ್ತಿದ್ದಾರಾ ಅನ್ನೋ ಅನುಮಾನ ಮೂಡತಾ ಇದೆ.ರಾಜಕೀಯ ಮುಖಂಡರು ಪೋಲೀಸರ ಮೇಲೆ ಮುಗಿಬಿದ್ದ ತಕ್ಷಣ ಪೋಲೀಸರ ಸೈಡ್ ಅಷ್ಟೇ ತನಿಖೆ ನಡಿತಾ ಇದೆ ಅನ್ನೋ ಮಾತುಗಳು ಕೇಳಿ ಬರತಿವೆ..

ವಿದ್ಯಾರ್ಥಿ ಸುಸೈಡ್ ಪ್ರಕರಣದಲ್ಲಿ ಕಾಗೆ ಕೂಡ್ರೋದಕ್ಕೂ ಟೊಂಗೆ ಮುರಿಯೋದಕ್ಕೆ ಸರಿ ಅನ್ನೋ ರೀತಿ ಆ ಪ್ರಕರಣ ನಡೆದು ಹೋಗಿದೆ..ಇನಸ್ಪೆಕ್ಟರ್ ಸೇರಿ ನಾಲ್ವರು ಅಮಾನತ್ತು ಆಗಿದ್ದಾರೆ…ಆ ಪ್ರಕರಣದಲ್ಲಿ ಎರಡು ಸಾವಿರ ಪೋಲೀಸರು ತೆಗೆದುಕೊಂಡರೆ ಆ ಎರಡು ಸಾವಿರಕ್ಕೆ ಸುಸೈಡ್ ಮಾಡಿಕೊಳ್ಳಬಹುದಾ ಅದು ತನಿಖೆ ಇಲ್ವಾ..?

ಒನ್ ಸೈಡ್ ತನಿಖೆ ನಡೆದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ನಡೆದರೆ ಅದರ ಮುಂದಿನ ಸವಾಲುಗಳು ಬೇರೇನೇ ಅನ್ನೋ ಮಾತುಗಳು ಸಿಬ್ಬಂದಿಗಳ ನಡುವೆ ಮಾತುಕತೆ ನಡೆದಿವೆ ಅಂತೆ..ಆದಿತ್ಯಾ ಪ್ರಕರಣದ ತನಿಖೆ ರಾಜ್ಯದಲ್ಲಿಯೇ ಮತ್ತೊಂದು ಹೋರಾಟದ ಕಿಚ್ಚು ಹಚ್ಚುವ ಗುಸು ಗುಸು ಸುದ್ದಿಗಳು ಹರಿದಾಡುತ್ತಿವೆ.ಎಲ್ಲದಕ್ಕೂ ತನಿಖೆ ಯಾವ ರೀತಿ ನಡೆಯುತ್ತದೆ ಅನ್ನೋದರ ಕಡೆನೆ ಎಲ್ಲರ ಗಮನ…

ಉದಯ ವಾರ್ತೆ
ಧಾರವಾಡ.


Share to all

You May Also Like

More From Author