ಸದ್ದಿಲ್ಲದೇ ದಕ್ಷ ಕಮೀಷನರ್ ಹೆಸರಿಗೆ ಮಸಿ ಬಳೆಯಲು ಬಿಜೆಪಿ ಶಾಸಕರೊಬ್ಬರ ಮನೆ ಬಾಗಿಲು ತಟ್ಟಿದ್ದ ಆ ಕೇ..ಕೇ ಅಧಿಕಾರಿ…
ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಅಂದರೆ ಕಳ್ಳರು..ಬಡ್ಡಿ ದಂಧೆಕೋರರು..ರೌಡಿಗಳಿಗೆ ಕನಸಿನಲ್ಲಿ ಬರಲಾರಂಭಿಸಿದ್ದ ದಕ್ಷ ಕಮೀಷನರ್ ಎನ್ ಶಶಿಕುಮಾರ ಅವರ ಹೆಸರಿಗೆ ಮಸಿ ಬಳೆಯುವ ಪ್ರಯತ್ನ ಮಾಡಿದರಾ ಕದ್ದು ಹಾಲು ಕುಡಿದು ಕೇ..ಕೇ ಹಾಕಿದ ಆ ಅಧಿಕಾರಿ.ಈಗ ಆ ಅಧಿಕಾರಿ ವಿರುದ್ಧ ಇಲಾಖೆಯಲ್ಲೇ ಉಂಡು ಮನೆ ಜಂತಿ ಎಣಿಸದರಾ ಛೇ.. ಅನ್ನೋ ಮಾತುಗಳು ಕೇಳಿ ಬರಲಾಂಭಿಸಿವೆ…
ಹುಬ್ಬಳ್ಳಿ-ಧಾರವಾಕ್ಕೆ ಕಮೀಷನರ್ ಎನ್ ಶಶಿಕುಮಾರ ಅಂತಾ ಬಂದ ದಿನದಿಂದ ಇಲಾಖೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಕುಟುಂಬದ ರೀತಿ ನಡೆದುಕೊಂಡಿದ್ದರು.ಅಂತಹ ಅಧಿಕಾರಿಗೆ ಬಗಲಲ್ಲೆ ಇದ್ದುಕೊಂಡು ಚಾಕಿ ಇರಿವ ಕೆಲಸ ಮಾಡಿದರಾ ಹಿಂಗಾದರೆ ಹೆಂಗರೀಪಾ ನಮ್ಮ ಇಲಾಖೆಯಲ್ಲಿ ನಾವು ಕೆಲಸ ಮಾಡೋದು ಅಂತಾ ಸಿಬ್ಬಂದಿಗಳೇ ಅಂತಿದ್ದಾರೆ..
ಹವಾಲಾ ದಂಧೆಯ ವರ್ಷದ ಪ್ಯಾಕೇಜ್ ಮುಗಿಸಿಕೊಂಡಿರುವ ಆ ಕೇ..ಕೇ ಅಧಿಕಾರಿ ಬಾಯಲ್ಲಿ ಬರೋದು ಮಾತ್ರ ಇವನಾರವ..ಇವನಾರವ
ಇವನಾರವನೆಂದೆನಿಸದಿರಯ್ಯಾ!!
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದನಸಯ್ಯಾ
ಕೂಡಲಸಂಗಮದೇವಾ..
ನಿಮ್ಮ ಮಗನೆಂದನಸಯ್ಯಾ.!!!
ಇಂತಹ ವಚನಗಳನ್ನ ಹೇಳುತ್ತಲೇ ಹಿರಿಯ ಅಧಿಕಾರಿಯ ಹೆಸರನ್ನು ಕೂಲ್ ಆಗಿ ಕೆಡಿಸಲು ಬಿಜೆಪಿಯ ಓರ್ವ ಶಾಸಕ ಹಾಗೂ ದಾಖಲೆಯ ವೀರನ ಮನೆ ಬಾಗಿಲು ತಟ್ಟಿ ಅವರ ಕಿವಿಯಲ್ಲಿ ಗುಸು
.ಗುಸು ಮಾಡಿ ಬಂದಿದ್ದೂ ಗುಟ್ಟಾಗಿ ಉಳಿದಿಲ್ಲಾ..
ಪೋಲೀಸ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಿಗೆ ಎರಡು ವರ್ಷ ಆಗತಿದ್ದಂತೆ ವರ್ಗಾವಣೆ ಗುಮ್ಮ ಆರಂಭವಾಗೇ ಬಿಡತೈತಿ ಆದರೆ ಕೇ..ಕೇ ವೀರನಿಗೆ ಎರಡು ತುಂಬಿ ಮೂರರಲ್ಲಿ ಬಿದ್ದರೂ ಅವರ ಬಗ್ಗೆ ಚಕಾರ ಎತ್ತದ ಜನಪ್ರತಿನಿಧಿಗಳು ಎರಡು ವರ್ಷ ಪೋರೈಸುವ ಮುನ್ನವೇ ದಕ್ಷ ಅಧಿಕಾರಿಗೆ ಮುಗಿಬಿದ್ದಿದ್ದಾರೆಂದರೆ ಕೇ..ಕೇ..ವೀರ ಅವರ ಮುಂದೆ ಹೆಂಗ ವಚನಗಳನ್ನ ಹೇಳಿರಬೇಕು ಹೇಳಿ..