ಹುಬ್ಬಳ್ಳಿ ಗ್ರಾಮೀಣದ ಜೋಡೆತ್ತುಗಳಿಗೆ ಐಜಿಪಿಯಿಂದ ಪ್ರಶಂಸನಾ ಪತ್ರ… ಬೆನ್ನು ತಟ್ಟಿದ ಎಸ್ ಪಿ..

Share to all

ಹುಬ್ಬಳ್ಳಿ ಗ್ರಾಮೀಣದ ಜೋಡೆತ್ತುಗಳಿಗೆ ಐಜಿಪಿಯಿಂದ ಪ್ರಶಂಸನಾ ಪತ್ರ… ಬೆನ್ನು ತಟ್ಟಿದ ಎಸ್ ಪಿ..

ಹುಬ್ಬಳ್ಳಿ:- ಕಳೆದ ಮೂರು ವರ್ಷಗಳಿಂದ ಇನಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಮಾರ್ಗದರ್ಶನದಲ್ಲಿ ಕಳ್ಳತನ,ರಾಬರಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ ಜೋಡೆತ್ತುಗಳಿಗೆ ಡಾ;- ಕೆ ತ್ಯಾಗರಾಜನ್ ಐಜಿಪಿ ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.ಅಲ್ಲದೇ ಮುಂದೆಯೂ ಇಲಾಖೆಗೆ ಇದೇ ರೀತಿ ಉತ್ತಮ ಕೆಲಸ ಮಾಡಿ ಇಲಾಖೆಯ ಹೆಸರು ತನ್ನಿ ಎಂದು ಕಿವಿ ಮಾತು ಹೇಳಿದರು…

ಜೊಡೆತ್ತುಗಳು ಅಂದರೆ ಯಾರು ಅಂತೀರಾ..ಅವರಿಬ್ಬರೂ ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಹಗಲಿರುಳು ಹೆಗೆಲಿಗೆ ಹೆಗಲು ಕೊಟ್ಟು ಕೆಲಸ ಮಾಡುವ ಅಸಿಸ್ಟಂಟ್ ಸಬ್ ಇನಸ್ಪೆಕ್ಟರ ಎಂ.ಎನ್ ಹೊನ್ನಪ್ಪನವರ ಹಾಗೂ ಹೆಡ್ ಕಾನಸ್ಟೇಬಲ್ ಅಬ್ದುಲ್ ಕಾಕರ ಅಂತಾ..

ಹುಬ್ಬಳ್ಳಿ ಗ್ರಾಮೀಣದಲ್ಲಿ ರಾಬರಿ..ಮನೆ ಕಳ್ಳತನ..ಪ್ರಕರಣ ದಾಖಲಾದರೆ ಸಾಕು..ಆ ಪ್ರಕರಣಗಳನ್ನು ಕೈಗೆತ್ತಿಕೊಂಡು ತನ್ನ ತಂಡವನ್ನು ಕರೆದುಕೊಂಡು ಬೀದಿ ಬೀದಿ…ಊರೂರು..ಒಂದಾ ಎರಡಾ ಎಲ್ಲೆಲ್ಲಿ ಸಿಸಿಟಿವಿ ಇದೆ..ಆರೋಪಿಗಳ ಮೋಡಸ್ ಏನು ಅನ್ನೋದನ್ನ ಪತ್ತೆ ಹಚ್ಚಿ ಆರೋಪಿಗಳನ್ನ ಹಿಡಿಯೋವರೆಗೂ ಬಿಡಲ್ಲಾ ಈ ಜೋಡೆತ್ತುಗಳು ಹಾಗೂ ಅವರ ಟೀಂ..

ಇಂತಹ ಪ್ರಮುಖ ಕೇಸ್ ನಂಬರ 30/2026 ಹಾಗೂ 52/2026 ರ ರಾಬರಿ ಕೇಸ್ ಟ್ರೇಸ್ ಮಾಡುವಲ್ಲಿ ಅತ್ಯುತ್ತಮ ಕಾರ್ಯನಿರ್ವಸಿದ್ದಕ್ಕೆ ಪ್ರಶಂಸನಾ ಪತ್ರ ಲಭಿಸಿದೆ..ಈ ಜೋಡೆತ್ತುಗಳಿಗೆ ಉದಯ ವಾರ್ತೆಯಿಂದಲೂ ಒಂದು ಸಲಾಂ..

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author